varthabharthi

ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 18 Jun, 2018
ಪಿ.ಎ.ರೈ

ಅನ್ಯ ಪಕ್ಷಗಳ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತೇವೆ ಎಂದರೆ ಬೇಡ ಎನ್ನಲು ಆಗುವುದಿಲ್ಲ - ಶ್ರೀರಾಮುಲು, ಶಾಸಕ

ನಿಮ್ಮ ಪಕ್ಷದ ಶಾಸಕರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗುತ್ತೇವೆ ಎಂದರೆ?
---------------------
ಕುಮಾರಸ್ವಾಮಿ ಸಿಎಂ ಆದ ಮೇಲೆ ಚೆನ್ನಾಗಿ ಮಳೆ ಬರುತ್ತಿದೆ - ಎಚ್.ಡಿ. ರೇವಣ್ಣ, ಸಚಿವ

ಒಂದು ವೇಳೆ ಮಳೆ ಬರದೇ ಇದ್ದಿದ್ದರೆ ಅದಕ್ಕೆ ಕುಮಾರಸ್ವಾಮಿ ಕಾರಣವಾಗಿರುತ್ತಿತ್ತೆ?
---------------------
ರಾಜ್ಯದಲ್ಲಿ ಕಾಂಗ್ರೆಸಿಗರಿಂದಲೇ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಚಾಲನೆ ಸಿಗಲಿದೆ - ಕೆ.ಎಸ್.ಈಶ್ವರಪ್ಪ, ಶಾಸಕ

ನೀವು ನಾಲಿಗೆಗೆ ತುಸು ವಿಶ್ರಾಂತಿ ಕೊಡದೇ ಇದ್ದರೆ ಅದು ಸಾಧ್ಯವಿಲ್ಲದ ಕೆಲಸ.

---------------------
ವಿಧಾನ ಪರಿಷತ್‌ನಲ್ಲಿ ಹುಲಿ, ಕರಡಿಗಳಿಲ್ಲ - ಜಯಮಾಲಾ, ಸಚಿವೆ

ಬರೇ ನರಿಗಳಿದ್ದಾವೆ ಎಂದು ಹೇಳುತ್ತಿದ್ದೀರಾ?

---------------------
ಕಾಡು ಪ್ರಾಣಿ ಹಾವಳಿ ತಡೆಗೆ ಸೂಕ್ತ ಯೋಜನೆ ರೂಪಿಸಲಾಗುವುದು - ಆರ್.ಶಂಕರ್, ಸಚಿವ

ಅವೆಲ್ಲವೂ ಕರಾವಳಿಯಲ್ಲಿ ಗೋರಕ್ಷಕರ ವೇಷದಲ್ಲಿ ಹಾವಳಿ ಮಾಡುತ್ತಿವೆ.

---------------------
ನನಗೆ ಮುಖ್ಯಮಂತ್ರಿಯಾಗಲು ಇಷ್ಟವಿರಲಿಲ್ಲ, ಕಾಂಗ್ರೆಸ್ ಮುಖಂಡರೇ ಪಟ್ಟು ಹಿಡಿದು ನನ್ನನ್ನು ಮುಖ್ಯಮಂತ್ರಿ ಮಾಡಿದರು - ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಹಿಂದೆ ಬಿಜೆಪಿಯವರು ಕೂಡ ಇದೇ ರೀತಿ ನಿಮಗೆ ಕಷ್ಟ ಕೊಟ್ಟರು.

---------------------

ದಿಲ್ಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಪ್ ಬಿಜೆಪಿ ಪರ ಪ್ರಚಾರ ಮಾಡಲಿದೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

ಕೋರೆ ಹಲ್ಲು ಕೊಟ್ಟು ಕಚ್ಚಿಸಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ.

---------------------

ಪ್ರತಿಪಕ್ಷಗಳು ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಬೆಲೆಯಿಲ್ಲ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಸದ್ಯ ಪ್ರಜಾಪ್ರಭುತ್ವ ಬೆಲೆ ಕಳೆದುಕೊಂಡಿದೆ ಎಂದು ಇದರ ಅರ್ಥವೇ?
---------------------

ಸದ್ಯದಲ್ಲೇ ಪ್ರತಿಪಕ್ಷಗಳು ಒಂದಾಗಲಿವೆ - ರಾಹುಲ್ ಗಾಂಧಿ , ಕಾಂಗ್ರೆಸ್ ಅಧ್ಯಕ್ಷ

ಒಂದಾಗುವ ಮೊದಲೇ ಬೇರೆ ಬೇರೆಯಾಗುವ ದಿನ ನಿಗದಿಯಾಗಿದೆಯಂತೆ.

---------------------

ನರೇಂದ್ರ ಮೋದಿ ಸರಕಾರ ಅಭಿವೃದ್ಧಿಯಲ್ಲಿ ಅಮೆರಿಕವನ್ನು ಮೀರಿಸುವ ಮಟ್ಟಕ್ಕೆ ಬೆಳೆದಿದೆ - ನಳಿನ್ ಕುಮಾರ್ ಕಟೀಲು, ಸಂಸದ

ನಿಮ್ಮನ್ನು ಸಂಸದರಾಗಿ ಮಾಡಿದ ತಪ್ಪಿಗೆ ಜನರು ಇದನ್ನೆಲ್ಲ ಕೇಳಲೇ ಬೇಕು.

---------------------

ನಾನು ಬಲಿಪಶು - ಎಂ.ಬಿ. ಪಾಟೀಲ್, ಮಾಜಿ ಸಚಿವ

ಶರಣರೆಂದ ಮೇಲೆ ತಲೆದಂಡ ಸಹಜ.

---------------------

ಕೈಕಟ್ಟಿ ಕೂರುವ ಸಭಾಪತಿ ಸ್ಥಾನ ನನಗೆ ಬೇಡ - ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ

ಕೈ ಕಟ್ಟದೇ ಕುಳಿತುಕೊಳ್ಳಿ.

---------------------
ಮೋದಿ ಹತ್ಯೆಯ ಸಂಚು ಒಂದು ಹಾರರ್ ಸಿನೆಮಾದ ಕತೆಯಂತಿದೆ - ಶರದ್ ಪವಾರ್, ಎನ್‌ಸಿಪಿ ನಾಯಕ.

ಮೋದಿಯವರು ಪ್ರಧಾನಿಯಾದದ್ದೇ ಒಂದು ಹಾರರ್.

---------------------
ಪ್ರಧಾನಿ ಮೋದಿ ದೇಶವನ್ನು ಮಾರಾಟ ಮಾಡುತ್ತಿದ್ದಾರೆ - ಕೆ. ವಸಂತ ಬಂಗೇರ, ಶಾಸಕ

ದೊಡ್ಡ ಬೆಲೆಗೆ ಮಾರಾಟ ಮಾಡಿದ್ದಿದ್ದರೆ ಒಂದಿಷ್ಟಾದರೂ ಗೌರವವಿರುತ್ತಿತ್ತು.

---------------------
ಜಗತ್ತಿನಲ್ಲಿ ಎಲ್ಲ ಕಾಯಿಲೆಗಳಿಗೂ ಔಷಧಗಳಿವೆ, ಆದರೆ ಹೊಟ್ಟೆಕಿಚ್ಚಿಗೆ ಮದ್ದಿಲ್ಲ - ಜಯಮಾಲಾ, ಸಚಿವೆ

ಅಧಿಕಾರವಿರುವಲ್ಲಿ, ಹೊಟ್ಟೆಕಿಚ್ಚು ಸಹಜ.

---------------------
ಪಕ್ಷದ ಅನುಮತಿ ಇಲ್ಲದೆ ಪ್ರತ್ಯೇಕ ಸಭೆಗಳನ್ನು ನಡೆಸಲು ಯಾರಿಗೂ ಅಧಿಕಾರವಿಲ್ಲ - ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ

ಕೋಳಿಯನ್ನು ಕೇಳಿ ಯಾರಾದರೂ ಮಸಾಲೆ ಅರೆಯುತ್ತಾರೆತಯೇ?
---------------------
ಮುಸ್ಲಿಂ ಸಮುದಾಯ ಯಾರೊಬ್ಬರ ಕಿಸೆಯಲ್ಲೂ ಇಲ್ಲ - ಯು.ಟಿ. ಖಾದರ್, ಸಚಿವ

ಮುಸ್ಲಿಮ್ ಸಮುದಾಯ ಇರುವುದೇ ಚುನಾವಣೆಯೆಂಬ ಈದ್‌ಗೆ ಬಲಿ ಕೊಡುವುದಕ್ಕೆ.

---------------------

ರಾಜ್ಯದಲ್ಲಿ ನನ್ನ ಹೆಸರು ಜೋರಾಗಿಯೇ ಓಡುತ್ತಿದೆ - ಎಚ್.ಡಿ. ರೇವಣ್ಣ, ಸಚಿವ

ಪೆಟ್ರೋಲ್ ಮುಗಿದಾಕ್ಷಣ ನಿಲ್ಲಬಹುದು, ಚಿಂತೆ ಬೇಡ.

---------------------
ಸಿ.ಎಂ. ಕುಮಾರ ಸ್ವಾಮಿ ರೈತರಿಗೆ ಮಾತು ಕೊಟ್ಟಂತೆ ಸಾಲ ಮನ್ನಾ ಮಾಡದಿದ್ದರೆ ವಾನಪ್ರಸ್ಥಾಶ್ರಮವೇ ಗತಿ - ಸಿ.ಟಿ. ರವಿ, ಶಾಸಕ

ಯಡಿಯೂರಪ್ಪರ ಗೃಹಸ್ಥಾಶ್ರಮ ಮುಗಿಯಿತೇ?

---------------------
ಕಾಂಗ್ರೆಸ್ ಶಾಸಕರ ಅತೃಪ್ತಿ ಶಮನ ಆಗದೆ ಇರುವುದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ - ಕುಮಾರಸ್ವಾಮಿ, ಮುಖ್ಯಮಂತ್ರಿ

ಅವರ ಅತೃಪ್ತಿ ಶಮನವಾಗಬೇಕಾದರೆ, ತಾವು ಸಹಕರಿಸುವುದು ಅಗತ್ಯವಾಗುತ್ತದೆ.

---------------------
ನೈಋತ್ಯ ಶಿಕ್ಷಕರ ಚುನಾವಣೆಯಲ್ಲಿ ಈ ಬಾರಿ ಮತದಾರರು ನನ್ನನ್ನು ಚುನಾಯಿಸಲು ಮನಸ್ಸು ಮಾಡಲಿಲ್ಲ - ಗಣೇಶ್ ಕಾರ್ಣಿಕ್, ಬಿಜೆಪಿ ಪರಾಜಿತ ಅಭ್ಯರ್ಥಿ

ಸದಾ ಒಬ್ಬರನ್ನು ಮೋಸ ಮಾಡುವುದು ಕಷ್ಟ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು