ಪೆರು ತಂಡಕ್ಕೆ ಸೋಲಿನ ಬರೆ ಎಳೆದ ಡೆನ್ಮಾರ್ಕ್
ಸಾರಂಸ್ಕ್, ಜೂ.17: ಯೂಸುಫ್ ಯೂರಾರಿ ಬಾರಿಸಿದ ಏಕೈಕ ಗೋಲು ನೆರವಿನಿಂದ ಡೆನ್ಮಾರ್ಕ್ ತಂಡ ಪೆರು ವಿರುದ್ಧ 1-0 ಅಂತರದಿಂದ ಹೋರಾಟಕಾರಿ ಗೆಲುವು ಸಾಧಿಸಿತು. ಈ ಮೂಲಕ ವಿಶ್ವಕಪ್ನಲ್ಲಿ ಗೆಲುವಿನ ಆರಂಭ ಪಡೆಯಿತು.
ಶನಿವಾರ ರಾತ್ರಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ 59ನೇ ನಿಮಿಷದಲ್ಲಿ ಗೋಲು ಬಾರಿಸಿದ 24ರ ಹರೆಯದ ಯೂಸುಫ್ ಡೆನ್ಮಾರ್ಕ್ಗೆ ಗೆಲುವು ತಂದುಕೊಟ್ಟರು.
ಪೆರು ಹೆಚ್ಚು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಆದರೆ, ಅಂತಿಮವಾಗಿ ಡೆನ್ಮಾರ್ಕ್ ಮೂರಂಕವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಪೆರು ಆಟಗಾರ ಕ್ರಿಸ್ಟಿಯನ್ ಕುವಾ ಬಾರಿಸಿದ ಪೆನಾಲ್ಟಿ ಗೋಲು ಗುರಿ ತಪ್ಪಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. 14 ತಿಂಗಳ ಡ್ರಗ್ ನಿಷೇಧದಿಂದ ಮುಕ್ತರಾಗಿ ವಿಶ್ವಕಪ್ನಲ್ಲಿ ಆಡುವ ಅವಕಾಶ ಪಡೆದಿದ್ದ ಪಾಲೊ ಗುರ್ರೆರೊ ವಾಪಸಾತಿಯಿಂದ ಪೆರು ತಂಡಕ್ಕೆ ಲಾಭವಾಗಲಿಲ್ಲ.
Next Story