ಜಪಾನ್ ನ ಒಸಾಕಾದಲ್ಲಿ ಭೂಕಂಪ: ಮೂವರು ಮೃತ್ಯು
ಒಸಾಕ, ಜೂ.18: ಜಪಾನ್ ನ ಅತೀ ದೊಡ್ಡ ನಗರಗಳಲ್ಲೊಂದಾದ ಒಸಾಕದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.
ಆದರೆ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. ಹಾನಿಯ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಜನರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಪ್ರಧಾನ ಮಂತ್ರಿ ಶಿಂಝೋ ಅಬೆ ಪ್ರತಿಕ್ರಿಯಿಸಿದ್ದಾರೆ.
ಒಸಾಕಾ ಜಪಾನ್ ನ ಪ್ರಮುಖ ಕೈಗಾರಿಕಾ ನಗರವಾಗಿದೆ. ಜನರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಭೂಕಂಪನ ಸಂಭವಿಸಿದೆ.
Next Story