ಲಕ್ನೋ: ಹೊಟೇಲ್ ನಲ್ಲಿ ಅಗ್ನಿ ಅನಾಹುತ; ಐವರು ಮೃತ್ಯು
ಲಕ್ನೋ, ಜೂ.19: ಇಲ್ಲಿನ ಹೊಟೇಲ್ ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಇಲ್ಲಿನ ವಿರಾಟ್ ಹೊಟೇಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹೊಟೇಲ್ ಒಳಗೆ ಹೊಗೆ ಆವರಿಸಿದೆ. ಅಡುಗೆ ಕೋಣೆಯಲ್ಲಿ ಅನಿಲ ಸೋರಿಕೆಯೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಮಗು, ಮಹಿಳೆ ಸೇರಿ ಐವರು ಮೃತಪಟ್ಟರುವುದಾಗಿ ಶಂಕಿಸಲಾಗಿದೆ.
ಹತ್ತಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story