ಜೂ.23: ಲೂರ್ಡ್ಸ್ ಸೆಂಟ್ರಲ್ ಶಾಲಾ ಸಂಭ್ರಮ
ಮಂಗಳೂರು, ಜೂ.19: ನಗರದ ಲೂರ್ಡ್ಸ್ ಸೆಂಟ್ರಲ್ ಶಾಲೆಯು 20ನೆ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ವಿಂಶತಿ ಸಂಭ್ರಮದ ಉದ್ಘಾಟನೆ ಹಾಗೂ ಶಾಲೆಯ 10ನೆ ಹಾಗೂ 12ನೆ ತರಗತಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯವು ಜೂ. 23ರಂದು ಶಾಲಾ ಸಭಾಭವನದಲ್ಲಿ ನಡೆಯಲಿದೆ.
ಮಂಗಳೂರು ಬಿಷಪ್ ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶಾಲಾ ಪ್ರಾಂಶುಪಾಲ ಫಾ. ರೋಬರ್ಟ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story