ತನ್ನಲ್ಲಿ ಬಾಂಬ್ ಇದೆ ಎಂದಾತನ ಬಂಧನ
ಲಂಡನ್, ಜೂ. 22: ತನ್ನಲ್ಲಿ ಬಾಂಬ್ ಇದೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನನ್ನು ಲಂಡನ್ನ ಚೇರಿಂಗ್ ಕ್ರಾಸ್ ರೈಲು ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಬ್ರಿಟಿಶ್ ಪೊಲೀಸರು ಶುಕ್ರವಾರ ಹೇಳಿದ್ದಾರೆ.
‘‘ಈಗ ನಾವು ರೈಲು ನಿಲ್ದಾಣವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ತೆರೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ’’ ಎಂದು ಬ್ರಿಟಿಶ್ ಸಾರಿಗೆ ಪೊಲೀಸರು ತಿಳಿಸಿದರು.
ಈ ಘಟನೆಯ ಬೆನ್ನಲ್ಲೇ, ಬ್ರಿಟನನ್ನು ಎರಡನೇ ಗರಿಷ್ಠ ಎಚ್ಚರಿಕೆಯ ಮಟ್ಟದಲ್ಲಿ ಇರಿಸಲಾಗಿದೆ.
Next Story