ವಡೋದರ: ಶಾಲಾ ಬಾಲಕನನ್ನು ಹತ್ಯೆಗೈದ 10ನೇ ತರಗತಿ ವಿದ್ಯಾರ್ಥಿಯ ಬಂಧನ
ಅಹ್ಮದಾಬಾದ್, ಜೂ.23: ವಡೋದರದ ಶಾಲೆಯೊಂದರ ಶೌಚಾಲಯದಲ್ಲಿ 9ನೇ ತರಗತಿಯ ವಿದ್ಯಾರ್ಥಿಯನ್ನು ಇರಿದು ಕೊಲೆಗೈದ 10ನೇ ತರಗತಿಯ ವಿದ್ಯಾರ್ಥಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
14ರ ಹರೆಯದ 9ನೇ ತರಗತಿಯ ವಿದ್ಯಾರ್ಥಿಗೆ 15 ಬಾರಿ ಇರಿದು ಹತ್ಯೆಗೈಯ್ಯಲಾಗಿತ್ತು. ಘಟನೆ ನಡೆದ ಶುಕ್ರವಾರ ರಾತ್ರಿಯೇ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ನಡುವೆ ಯಾವುದೋ ವಿಚಾರದಲ್ಲಿ ಮನಸ್ತಾಪ ಉಂಟಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಇಬ್ಬರ ನಡುವೆ ದ್ವೇಷಕ್ಕೆ ನಿಜವಾದ ಕಾರಣವನ್ನು ತಿಳಿಯಲು ತನಿಖಾಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗೆ ಸೇರಿದ ಶಾಲಾ ಬ್ಯಾಗ್ ಶಾಲಾ ಕಟ್ಟಡದ ಸಮೀಪದಲ್ಲಿರುವ ದೇವಸ್ಥಾನದ ಟೆರೇಸ್ನಲ್ಲಿ ಪತ್ತೆಯಾಗಿದೆ. ಬ್ಯಾಗ್ನಲ್ಲಿ ಮೂರು ದೊಡ್ಡ ಚಾಕುಗಳು ಹಾಗೂ ಒಂದು ಬಾಟಲ್ನಲ್ಲಿ ಕೆಂಪು ಮಣಸಿನ ಪುಡಿ ತುಂಬಿಸಿಡಲಾಗಿತ್ತು. 12 ಇಂಚು ಉದ್ದದ ಮತ್ತೊಂದು ಚಾಕು ಬಾಲಕನ ಮೃತದೇಹ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.