varthabharthi

ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 25 Jun, 2018

ವಿಮರ್ಶಕರು ಕೊಲೆಗಡುಕರು - ದೊಡ್ಡರಂಗೇಗೌಡ, ಹಿರಿಯ ಕವಿ
ಅಂದರೆ ಗೌರಿ, ಕಲಬುರ್ಗಿಯವರ ಹತ್ಯೆಯ ಆರೋಪವನ್ನು ವಿಮರ್ಶಕರ ತಲೆಗೆ ಕಟ್ಟುವ ಹುನ್ನಾರವೇ?
---------------------------
ರಾಮಾಯಣ ಮಹಾ ಕಾವ್ಯವು ಉಗ್ರ ಹಿಂದೂಗಳದ್ದಲ್ಲ - ಪ್ರಸನ್ನ, ರಂಗಕರ್ಮಿ
ರಾಮಾಯಣ ಮಹಾಕಾವ್ಯ ಹಿಂದೂಗಳಿಗಷ್ಟೇ ಸೇರಿದ್ದಲ್ಲ ಎಂದಿದ್ದರೆ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು.
---------------------------
ಎಚ್.ಡಿ. ಕುಮಾರಸ್ವಾಮಿಯವರನ್ನು ನಾವೇ ಕರೆದು ಮುಖ್ಯಮಂತ್ರಿ ಮಾಡಿದ್ದು - ವೀರಪ್ಪ ಮೊಯ್ಲಿ, ಸಂಸದ
ಅದಕ್ಕಾಗಿಯೆ ಕಾಂಗ್ರೆಸ್‌ನ್ನು ಸೋಲಿಸಿದ್ದು ಕೂಡ ತಾವೇ ಎನ್ನುವ ವದಂತಿಗಳಿವೆ.

---------------------------
 ನಮಗೆ ನಮ್ಮ ತಂದೆ-ತಾಯಿ ಗೊತ್ತು - ಅನಂತಕುಮಾರ್ ಹೆಗಡೆ, ಸಂಸದ
 ತಂದೆ ತಾಯಿಗಳಿಂದ ಸಂಸ್ಕಾರ ಕಲಿಯದಿದ್ದರೆ, ಗೊತ್ತಿದ್ದು ಏನು ಪ್ರಯೋಜನ?
---------------------------
ಮುಸ್ಲಿಮರ ವಿಶ್ವಾಸ ಗೆಲ್ಲಲು ನರೇಂದ್ರ ಮೋದಿ ಇನ್ನಷ್ಟು ಕೆಲಸ ಮಾಡಬೇಕಿದೆ - ಮುಖ್ತಾರ್ ಅಬ್ಬಾಸ್‌ನಖ್ವಿ, ಕೇಂದ್ರ ಸಚಿವ

ಸಂವಿಧಾನದ ವಿಶ್ವಾಸ ಗೆದ್ದರೆ ದೇಶದ ವಿಶ್ವಾಸ ಗೆದ್ದಂತೆ.

---------------------------
ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ನಕ್ಸಲೈಟ್ ಇದ್ದಂತೆ - ಸುಬ್ರಮಣಿಯನ್‌ಸ್ವಾಮಿ, ಬಿಜೆಪಿ ಸಂಸದ
ಬಿಜೆಪಿಯ ಪಾಲಿಗೆ.

---------------------------
ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸಲು ರಾಹುಲ್ ಗಾಂಧಿ ಸಮರ್ಥ - ಶೀಲಾ ದೀಕ್ಷಿತ್, ಕಾಂಗ್ರೆಸ್ ನಾಯಕಿ
ಆದರೆ ಅದಕ್ಕೆ ಪಕ್ಷದೊಳಗಿರುವ ಹಳೆಯ ತಲೆಗಳು ಅವಕಾಶ ಮಾಡಿಕೊಡಬೇಕಲ್ಲ?
---------------------------
ನಾನು ಆರೋಗ್ಯವಾಗಿದ್ದೇನೆ, ಗರ್ಭಿಣಿಯಾಗಿಲ್ಲ - ಶಿಲ್ಪಾ ಶೆಟ್ಟಿ, ನಟಿ
ಗರ್ಭಿಣಿಯಾಗುವುದು ಅನಾರೋಗ್ಯದ ಲಕ್ಷಣವೇ?
---------------------------
ಸಮ್ಮಿಶ್ರ ಸರಕಾರದ ಬಗ್ಗೆ ನಾನು, ಸಿದ್ದರಾಮಯ್ಯ, ಸಿ.ಎಂ. ಕುಮಾರಸ್ವಾಮಿ ಬಿಟ್ಟು ಬೇರೆ ಯಾರೂ ಮಾತನಾಡಬಾರದು - ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

ಮತಕೊಟ್ಟ ಜನರ ಪಾತ್ರವೇನು?
---------------------------
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಿತ್ಯ ಯೋಗ ಮಾಡುತ್ತಾರೆ - ಬಾಬಾ ರಾಮ್‌ದೇವ್, ಯೋಗಗುರು
ಯೋಗದ ಮೇಲೆ ಜಿಎಸ್‌ಟಿ ಹಾಕುವ ಉದ್ದೇಶವಿದೆಯಂತೆ.

---------------------------
11 ಬಾರಿ ಗೆದ್ದರೂ ಮುಖ್ಯಮಂತ್ರಿ ಸಿಗದಿರುವುದಕ್ಕೆ ನನಗೆ ಬಹಳ ನೋವಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಗೆದ್ದವರೇ ಮುಖ್ಯಮಂತ್ರಿಯಾಗಬೇಕೆಂದೇನಿಲ್ಲ ಎನ್ನುವುದನ್ನು ಇತಿಹಾಸ ಹಲವು ಬಾರಿ ಹೇಳಿದೆ.

---------------------------
ಸರಕಾರಿ ಜಾಗದ ಕೊರತೆಯಿಂದ ವಸತಿರಹಿತರಿಗೆ ವಸತಿ ನೀಡಲು ಸಾಧ್ಯವಾಗಿಲ್ಲ - ಯು.ಟಿ. ಖಾದರ್, ಸಚಿವ
ಇರುವ ಸರಕಾರಿ ಜಾಗವನ್ನೆಲ್ಲ ರಾಜಕಾರಣಿಗಳು ಒತ್ತುವರಿ ಮಾಡಿಕೊಂಡರೆ ಇನ್ನೇನಾಗುತ್ತದೆ?
---------------------------
ಗೌರಿ ಲಂಕೇಶ್ ಹತ್ಯೆಯಲ್ಲಿ ಯಾವುದೇ ಹಿಂದೂಪರ ಸಂಘಟನೆಗಳು ಭಾಗಿಯಾಗಿಲ್ಲ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖ್ಯಸ್ಥ
ತಮ್ಮ ಸಂಘಟನೆ ಹಿಂದೂ ಪರ ಅಲ್ಲ ಎನ್ನುವುದು ಹಿಂದೂಗಳಿಗೆ ಚೆನ್ನಾಗಿ ಗೊತ್ತಿದೆ.

---------------------------
ಸಾಲ ಮನ್ನಾ ಯೋಜನೆ ಯಾವುದೇ ರೀತಿಯಲ್ಲೂ ಒಳ್ಳೆಯದಲ್ಲ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
ಚುನಾವಣೆಗೆ ಮುನ್ನ ಇಂತಹ ಹೇಳಿಕೆ ತಮಗೂ ಒಳ್ಳೆಯದಲ್ಲ.

---------------------------
ಜನರ ಸೇವೆ ಮಂತ್ರಿಸ್ಥಾನಕ್ಕಿಂತಲೂ ದೊಡ್ಡದು - ಶಾಮನೂರು ಶಿವಶಂಕರಪ್ಪ, ಶಾಸಕ

ಮಂತ್ರಿಸ್ಥಾನ ದೊರಕಿದರೆ ಜನಸೇವೆಗೆ ಸಮಯ ಎಲ್ಲಿರುತ್ತದೆ?
---------------------------
ನನ್ನ ಮಗ ಕುಮಾರಸ್ವಾಮಿಗೆ ಅಧಿಕಾರ ಕೊಟ್ಟದ್ದು ದೇವರು - ದೇವೇಗೌಡ, ಮಾಜಿ ಪ್ರಧಾನಿ

ಸೋನಿಯಾ ಗಾಂಧಿಯನ್ನು ಈ ಮಟ್ಟಿಗೆ ಹೊಗಳುವುದು ಸರಿಯಲ್ಲ.

---------------------------
ಹಲಸಿನ ಹಣ್ಣಿನಿಂದ ಏಡ್ಸ್ ದೂರ- ರಘುಪತಿ ಭಟ್, ಶಾಸಕ
ಹೊಲಸಿನಿಂದ ದೂರ ಇದ್ದರೆ ಹಲಸಿನ ಅಗತ್ಯವಿಲ್ಲ.

---------------------------
ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನಾನು ಅಕ್ಕ - ಜಯಮಾಲಾ, 
ಸಚಿವೆ ಒಟ್ಟಿನಲ್ಲಿ ಇಬ್ಬರೂ ಹೊಂದಾಣಿಕೆಯ ಮೂಲಕ ಸೇವೆ ಮಾಡಿ.

---------------------------

ಸ್ವಯಂಘೋಷಿತ ಕಳ್ಳ ಸಾಧುಗಳನ್ನು ನೇಣುಹಾಕಿ - ಬಾಬಾ ರಾಮ್‌ದೇವ್, ಯೋಗಗುರು

ನೇಣು ಹಾಕದಿದ್ದರೂ ಪರವಾಗಿಲ್ಲ, ಅವರ ಸಂಸ್ಥೆಗಳಿಗೆ ತೆರಿಗೆಯನ್ನಾದರೂ ಹಾಕಿ.

---------------------------

ಪ್ರಧಾನಿ ನರೇಂದ್ರ ಮೋದಿಗೆ ಮದುವೆಯೇ ಆಗಿಲ್ಲ - ಆನಂದಿಬೆನ್ ಪಟೇಲ್, ಗುಜರಾತ್ ಮಾಜಿ ಮುಖ್ಯಮಂತ್ರಿ
ಹಾಗಾದರೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಯೇ?
---------------------------

ರಾಜ್ಯದಲ್ಲಿ ಅತೃಪ್ತರ ಸರಕಾರ ಆಡಳಿತದಲ್ಲಿದೆ- ಕೆ.ಎಸ್. ಈಶ್ವರಪ್ಪ, ಶಾಸಕ
ಜೊತೆಗೆ ಅತೃಪ್ತ ವಿರೋಧ ಪಕ್ಷ ಕೂಡ.

---------------------------
 ಶೋಭಾ ಕರಂದ್ಲಾಜೆ ಮನೆ ಶೋಧಿಸಿದರೆ ಯಡಿಯೂರಪ್ಪರ ಖಜಾನೆ ಸಿಗುತ್ತದೆ - ಡಿ.ಕೆ. ಶಿವಕುಮಾರ್, ಸಚಿವ
 ಕುಮಾರಸ್ವಾಮಿಯವರ ಖಜಾನೆ ಶೋಧಿಸಲು ಯಾರ ಮನೆ ಬಾಗಿಲು ತಟ್ಟಬೇಕು?
---------------------------

ಆರೆಸ್ಸೆಸ್‌ನ ಅಗೋಚರ ಹಸ್ತವು ಆಡಳಿತದ ಹಡಗನ್ನು ಬಂಡೆಗೆ ಢಿಕ್ಕಿ ಹೊಡೆಸಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಆ ಹಸ್ತವನ್ನು ಪ್ರಣವ್ ಮುಖರ್ಜಿ ಕುಲುಕಿ ಬಂದರಲ್ಲ, ಆ ಕುರಿತು ಮಾತನಾಡಿ.

---------------------------

ಕಾಂಗ್ರೆಸ್ - ಜೆಡಿಎಸ್‌ನವರು ಮಾಡುತ್ತಿರುವ ಪಾಪಕ್ಕೆ ಯಾವಾಗ ಕುಸಿಯುತ್ತಾರೆ ಎಂದು ನಾವು ಕಾಯುತ್ತಿದ್ದೇವೆ - ಶೋಭಾ ಕರಂದ್ಲಾಜೆ, ಸಂಸದೆ
ಕುಸಿಯಬೇಕಾದರೆ ಬಿಜೆಪಿಯ ಪಾಪದ ಹಣವೂ ಶಾಮೀಲಾಗಬೇಕು.

---------------------------
ದೇಶವನ್ನು ಮುನ್ನಡೆಸುವುದು ಮಕ್ಕಳಾಟವಲ್ಲ - ನರೇಂದ್ರ ಮೋದಿ.
 ಇಷ್ಟು ತಡವಾಗಿ ಗೊತ್ತಾಯಿತೇ?
---------------------------

2029ರ ವರೆಗೂ ಮೋದಿಯೇ ಗೆಲ್ಲಬೇಕು, ಇಲ್ಲದಿದ್ದರೆ ಈ ದೇಶ ಉದ್ಧಾರವಾಗುವುದಿಲ್ಲ - ಎಸ್.ಎಲ್.ಭೈರಪ್ಪ, ಸಾಹಿತಿ

ಅಲ್ಲಿಯವರೆಗೆ ತಾವು ರಾಷ್ಟ್ರೀಯ ಪ್ರೊಫೆಸರ್ ಆಗಿ ಉಳಿಯಬಹುದು ಎನ್ನುವ ಯೋಚನೆಯೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು