ತುಮಕೂರು: ರಸ್ತೆ ಅಪಘಾತಕ್ಕೆ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತ್ಯು
ಲಾರಿ-ಕ್ಯಾಂಟರ್ ನಡುವೆ ಢಿಕ್ಕಿ
ತುಮಕೂರು, ಜು. 17: ಲಾರಿ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು - ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಚಾಲಕ ಕೆ.ಆರ್. ನಗರದ ಲೋಕೇಶ್ (34), ಹನುಮಂತರಾಜು (40) ಹಾಗು ರಾಧಾ (35) ಎಂದು ಗುರುತಿಸಲಾಗಿದೆ.
ಕಳ್ಳಬೆಳ್ಳ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತಿದ್ದಾರೆ.
Next Story