ಭಾರೀ ಮಳೆ: ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಇಂದು ರಜೆ
ಬೆಳ್ತಂಗಡಿ, ಜು.20: ತೀವ್ರ ಮಳೆಯ ಕಾರಣ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಇಂದು ( ಜುಲೈ 20) ರಜೆ ಘೋಷಿಸಿ ತಹಶೀಲ್ದಾರ್ ಮದನ್ ಆದೇಶಿಸಿದ್ದಾರೆ.
ತಾಲೂಕಿನಾದ್ಯಂತ ಗುರುವಾರವೂ ಭಾರೀ ಸುರಿದಿದ್ದು, ಇಂದು ಕೂಡಾ ಇದು ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಸಾರಲಾಗಿದೆ ಎಂದು ತಿಳಿದುಬಂದಿದೆ.
Next Story