ಅತ್ಯಾಚಾರ, ಸುಲಿಗೆ ಆರೋಪ : ಬಿಜೆಪಿ ಕೌನ್ಸಿಲರ್ ಬಂಧನ
ಮುಂಬೈ, ಜು. 22: ಯುವತಿಯೋರ್ವಳನ್ನು ಕಳೆದ ಮೂರು ವರ್ಷಗಳಿಂದ ಅತ್ಯಾಚಾರಗೈದ ಹಾಗೂ ಆಕೆಗೆ ಹಣದ ಬೇಡಿಕೆ ಒಡ್ಡಿದ ಆರೋಪದಲ್ಲಿ ಯುವಾತ್ಮಲ್ ಜಿಲ್ಲೆಯ ವಾನಿ ಮಹಾನಗರಪಾಲಿಕೆಯ ಬಿಜೆಪಿ ಕೌನ್ಸಿಲರ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
20 ಹರೆಯದ ಯುವತಿ ನೀಡಿದ ದೂರಿನ ಆಧಾರದಲ್ಲಿ ವಾನಿ ಪಟ್ಟಣದ ವಸೇಕರ್ ಲೇಔಟ್ನ ನಿವಾಸಿ ದೀರಜ್ ದಿಗಂಬರ್ ಪಾಥೆ (29) ಅವರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದೆವು. ಚಿಕ್ಕಂದಿನಲ್ಲಿರುವಾಗಲೇ ನಮಗಿಬ್ಬರಿಗೆ ಪರಿಚಯ ಇತ್ತು” ಎಂದು ಯುವತಿ ನೀಡಿದ ದೂರಿನಲ್ಲಿ ಹೇಳಿದ್ದಾಳೆ ಎಂದು ವಾನಿ ಪೊಲೀಸ್ ಠಾಣೆಯ ಬಾಳಾಸಾಹೇಬ್ ಖಡೆ ತಿಳಿಸಿದ್ದಾರೆ. ‘‘ನಾನು 12ನೇ ತರಗತಿಯಲ್ಲಿ ಕಲಿಯುತ್ತಿರುವಾಗ, ಅಪ್ರಾಪ್ತೆಯಾಗಿದ್ದ ತನ್ನನ್ನು ವಿವಾಹವಾಗುತ್ತೇನೆ ಎಂದು ಪಾಥೆ ನಂಬಿಸಿ ಅತ್ಯಾಚಾರ ಎಸಗಿದ್ದರು.’’ ಎಂದು ಯುವತಿ ಆರೋಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ‘‘ವಯಸ್ಕಳಾದಾಗ ವಿವಾಹವಾಗುವಂತೆ ಅವರು ಬಲವಂತ ಮಾಡುತ್ತಿದ್ದರು. ನಾನು ನಿರಾಕರಿಸಿದೆ. ಅವರು ನನಗೆ ಕಿರುಕುಳ ನೀಡಲು ಆರಂಭಿಸಿದರು.