ಅಥ್ಲೆಟಿಕ್ಸ್: ಪೂವಮ್ಮ ಗೆ ಚಿನ್ನ
ಹೊಸದಿಲ್ಲಿ, ಜು.22: ಝೆಕ್ ಗಣರಾಜ್ಯದಲ್ಲಿ ಶನಿವಾರ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕನ್ನಡತಿ ಎಂ.ಆರ್. ಪೂವಮ್ಮ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ 53.01 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದಿದ್ದಾರೆ. ಓಟಗಾರ ರಾಜೀವ್ ಅರೋಕಿಯ ಪುರುಷರ200 ಮೀ. ಓಟದ ಸ್ಪರ್ಧೆಯಲ್ಲಿ 20.77 ಸೆಕೆಂಡ್ನಲ್ಲಿ ಗುರಿ ತಲುಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
Next Story