varthabharthi

ಈ ದಿನ

​ಜ್ವಾಲಾಮುಖಿಗೆ 9,000 ಮಂದಿ ಬಲಿ

ವಾರ್ತಾ ಭಾರತಿ : 29 Jul, 2018

1783: ಲಾಖಾ ದ್ವೀಪದಲ್ಲಿ ಈ ದಿನ ಸಂಭವಿಸಿದ ಸ್ಕಾಪ್ಟರ್ ಹೆಸರಿನ ಭೀಕರ ಜ್ವಾಲಾಮುಖಿ ಸ್ಫೋಟದಲ್ಲಿ 9,000 ಜನ ದುರ್ಮರಣಕ್ಕೀಡಾದರು. ಆ ಪ್ರದೇಶದಲ್ಲಿದ್ದ ಸುಮಾರು 130 ಸಕ್ರಿಯ ಜ್ವಾಲಾ ಮುಖಿಗಳು ಒಮ್ಮೆಲೆ ಸ್ಫೋಟಿಸಿದ ಪರಿಣಾಮ ಬೃಹತ್ ಪ್ರಮಾಣದ ಲಾವಾರಸ ಚಿಮ್ಮಿತು. ಇದರಲ್ಲಿದ್ದ ಸಲ್ಫರ್ ಡೈ ಆಕ್ಸೈಡ್ ಹಾಗೂ ಹೈಡ್ರೋಫ್ಲೊರಿಕ್ ಆಮ್ಲ ಜನರ ಸಾವಿಗೆ ಕಾರಣವಾಯಿತು.

1802: ಬರೋಡಾದ ಗಾಯಕ್ವಾಡ್ ಮತ್ತು ಬ್ರಿಟಿಷರ ನಡವೆ ಯುದ್ಧ ಒಪ್ಪಂದ ಏರ್ಪಟ್ಟಿತು.

1911: ಈ ದಿನ ಐಎಫ್‌ಎ ಪದಕವನ್ನು ಗೆಲ್ಲುವ ಮೂಲಕ ಮೋಹನ್ ಬಗಾನ್ ಫುಟ್ಬಾಲ್ ತಂಡ ಆ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿತು.

1949: ರಶ್ಯಾವು ಪಶ್ಚಿಮ ಜರ್ಮನಿ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ತೆಗೆದುಹಾಕಿತು.

2015: ಮೈಕ್ರೋಸಾಫ್ಟ್ ಕಂಪೆನಿಯಿಂದ ವಿಂಡೋಸ್ 10 ಸಾಫ್ಟ್‌ವೇರ್ ಬಿಡುಗಡೆ.

1891: ಸಮಾಜ ಸುಧಾರಕ, ಬಂಗಾಳದ ಲೇಖಕ ಈಶ್ವರಚಂದ್ರ ವಿದ್ಯಾಸಾಗರ ತಮ್ಮ 70ನೇ ವಯಸ್ಸಿನಲ್ಲಿ ಈ ದಿನ ನಿಧನರಾದರು. ಬಂಗಾಳದಲ್ಲಿ 19ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡ ಅವರು, ಆ ಕಾಲದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ವಿರೋಧಿಸಿದ್ದಲ್ಲದೆ ಅವನ್ನು ತೊಡೆದುಹಾಕಲು ಹಗಲಿರುಳು ಶ್ರಮಿಸಿದರು. ವಿಶೇಷವಾಗಿ ಬಾಲವಿಧವೆಯರ ಮರುಮದುವೆಯ ಕುರಿತು ಹೋರಾಟ ನಡೆಸಿದರು.

1996: ಸ್ವಾತಂತ್ರ ಹೋರಾಟಗಾರ್ತಿ ಅರುಣಾ ಅಸಫ್ ಅಲಿ ಈ ದಿನ ದಿಲ್ಲಿಯಲ್ಲಿ ನಿಧನರಾದರು. ಅವರಿಗೆ ಮರಣೋತ್ತರ ಭಾರತರತ್ನ ಸಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)