varthabharthi

ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 30 Jul, 2018
ಪಿ.ಎ.ರೈ

ಕಾಂಗ್ರೆಸ್ ಈಗ ಆತ್ಮಹತ್ಯಾ ಬಾಂಬರ್‌ನ ಪಾತ್ರಕ್ಕೆ ಸಿದ್ಧವಾದಂತಿದೆ -ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ

ಬಿಜೆಪಿಯ ವಿರುದ್ಧವಾಗಿದ್ದರೆ ದೇಶಕ್ಕೆ ಎರಡು ಲಾಭ. ಒಂದೆಡೆ ಕಾಂಗ್ರೆಸ್ ಮತ್ತೊಂದೆಡೆ ಬಿಜೆಪಿ ಎರಡೂ ಇಲ್ಲದಂತಾಗುತ್ತದೆ.

---------------------

ಸಿದ್ದರಾಮಯ್ಯರ ಪಕ್ಷ ನಿಷ್ಠೆ ಪ್ರಶ್ನಾತೀತ -ಆರ್.ಶಂಕರ್, ಸಚಿವ

ಅಂದರೆ ಅದನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬ ಎಚ್ಚರಿಕೆಯೇ?

---------------------

ಸದ್ಯ ಭಾರತ ಅತ್ಯಂತ ಅಪಾಯಕಾರಿ ಆಡಳಿತಗಾರರ ಕೈಯಲ್ಲಿದೆ - ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ

ಹಾಗೆಯೇ ದುರ್ಬಲ ವಿರೋಧಪಕ್ಷಗಳ ಕೈಯಲ್ಲಿ.

---------------------

ಸಮ್ಮಿಶ್ರ ಸರಕಾರ ಕನ್ನಡದ ಧಾರಾವಾಹಿ ‘ಮನೆಯೊಂದು ಮೂರು ಬಾಗಿಲು’ ಎಂಬಂತಾಗಿದೆ -ಸುರೇಶ್ ಅಂಗಡಿ, ಸಂಸದ 

ಬಾಗಿಲೇ ಇಲ್ಲದ ಕೇಂದ್ರ ಸರಕಾರಕ್ಕಿಂತ ವಾಸಿ.

---------------------

ಪಕ್ಷ ಬಯಸಿದರೆ ಲೋಕಸಭೆಗೆ ಸ್ಪರ್ಧಿಸಲು ಸಿದ್ಧ -ಬಿ.ವೈ.ರಾಘವೇಂದ್ರ, ಮಾಜಿ ಶಾಸಕ

ಬಯಸದಿದ್ದರೆ ಬಂಡಾಯ ಸ್ಪರ್ಧೆಯೇ?

---------------------

ನರೇಂದ್ರ ಮೋದಿ ಆಡಳಿತದಿಂದಾಗಿ ಉತ್ತಮ ದಿನಗಳು ನಮ್ಮ ಮುಂದೆ ಬಂದಿದೆ -ಕೋಟ ಶ್ರೀನಿವಾಸ ಪೂಜಾರಿ,  ವಿ.ಪ..ವಿ.ನಾಯಕ

ಬರೇ ನಿಮ್ಮ ಮುಂದೆ ಬಂದರೆ ಆಯಿತೇ, ದೇಶದ ಜನರ ಮುಂದೆ ಬರಬೇಡವೆ?

---------------------
 
ದೇಶಕ್ಕೆ ಸ್ವಾತಂತ್ರ ದೊರಕಿದ್ದು ಪುಕ್ಕಟೆ ಉಪವಾಸ ಕುಳಿತವರಿಂದಲ್ಲ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ಸಾವರ್ಕರ್ ಬ್ರಿಟಿಷರಿಗೆ ಕೊಟ್ಟ ಕ್ಷಮಾಪನೆ ಪತ್ರವನ್ನು ಮನ್ನಿಸಿ ಬ್ರಿಟಿಷರು ಸ್ವಾತಂತ್ರ ಕೊಟ್ಟರಂತೆ.

---------------------

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಮೂರು ಪಟ್ಟು ಹೆಚ್ಚಲಿದೆ -ಪಿ.ಚಿದಂಬರಂ, ಕೇಂದ್ರದ ಮಾಜಿ ಸಚಿವ

ಇವಿಎಂನ್ನು ನಿಮ್ಮ ಪರವಾಗಿ ಬದಲಿಸುವ ಸೂಚನೆ ಸಿಕ್ಕಿದೆಯೇ?

---------------------

ನಾನು ಇನ್ನು ಮುಂದೆ ಖುಷಿಯಾಗಿ, ಹಸನ್ಮುಖಿಯಾಗಿರುತ್ತೇನೆ -ನರೇಂದ್ರ ಮೋದಿ, ಪ್ರಧಾನಿ

ಆದರೆ ಜನಸಾಮಾನ್ಯರ ಗತಿಯೇನು?
---------------------

ಈ ದೇಶದಲ್ಲಿ ದನಗಳಿಗೆ ಇರುವಷ್ಟು ರಕ್ಷಣೆ ಮಹಿಳೆಯರಿಗಿಲ್ಲ - ಉದ್ಧವ್ ಠಾಕ್ರೆ, ಶಿವಸೇನೆ ಮುಖ್ಯಸ್ಥ

ಎತ್ತು ಸತ್ತಿತು ಎಂದು ದನದ ತಲೆಯನ್ನು ಬೋಳಿಸುವುದಿಲ್ಲ.

---------------------

ನಾನು ಸಚಿವ ಸ್ಥಾನದ ರೇಸ್‌ನಲ್ಲಿಯೇ ಇರಲಿಲ್ಲ -ಜಯಮಾಲಾ, ಸಚಿವೆ

ಕುದುರೆ ರೇಸ್‌ನಲ್ಲಿ ಕೆಲವೊಮ್ಮೆ ಓಡದ ಕುದುರೆ ಗೆಲ್ಲುವುದಿದೆ.

---------------------

ತಾರುಣ್ಯದಲ್ಲಿ ತನಗೆ ಸ್ತ್ರೀಸಂಗವಿತ್ತು, ಒಬ್ಬಳು ಪುತ್ರಿ ಇದ್ದಾಳೆ ಎಂಬ ಆರೋಪ ಸಾಬೀತಾದರೆ ಪೀಠತ್ಯಾಗಕ್ಕೂ ಸಿದ್ಧ -ವಿಶ್ವೇಶ ತೀರ್ಥ ಸ್ವಾಮೀಜಿ,  ಪೇಜಾವರ ಮಠ

ಅಂದರೆ, ಸಾಬೀತಾಗುವುದಿಲ್ಲ ಎನ್ನುವ ಧೈರ್ಯವೇ?
---------------------

ತಾಕತ್ತಿದ್ದರೆ ರಾಹುಲ್ ಗಾಂಧಿ ನನ್ನನ್ನು ಅಪ್ಪಿಕೊಳ್ಳಲಿ -ಯೋಗಿ ಆದಿತ್ಯನಾಥ್, ಉ.ಪ.ಮುಖ್ಯಮಂತ್ರಿ

ಇತ್ತೀಚೆಗೆ ಸ್ವಾಮಿಗಳು, ಯೋಗಿಗಳನ್ನು ಕಂಡರೆ ಮಹಿಳೆಯರೇಕೆ, ಪುರುಷರೇ ಹೆದರುತ್ತಾರೆ.

---------------------

ಉಪಮುಖ್ಯಮಂತ್ರಿ ಹುದ್ದೆಗೇರಿದರೂ ಸಮಾಜ ನನ್ನನ್ನು ದಲಿತನೆಂದೇ ನೋಡುತ್ತಿದೆ -ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

ಹಾಗೆ ನೋಡಿದ ಕಾರಣಕ್ಕಾಗಿಯೇ ತಾನೆ ಆ ಹುದ್ದೆ ಸಿಕ್ಕಿರುವುದು.

---------------------

ಗೋಮಾಂಸ ಭಕ್ಷಣೆ ನಿಲ್ಲದೆ ಗುಂಪುದಾಳಿ ಹತ್ಯೆ ನಿಲ್ಲದು -ಇಂದ್ರೇಶ್ ಕುಮಾರ್, ಆರೆಸ್ಸೆಸ್ ನಾಯಕ

ಆಹಾರವಿಲ್ಲದೆ ನಡೆಯುತ್ತಿರುವ ಸಾಮೂಹಿಕ ಹತ್ಯೆಗಳು ನಿಲ್ಲುವುದು ಯಾವಾಗ?

---------------------

ನಾನು ವಚನ ಭ್ರಷ್ಟನಲ್ಲ -ಕುಮಾರ ಸ್ವಾಮಿ, ಮುಖ್ಯಮಂತ್ರಿ

ಕುಟುಂಬಕ್ಕೆ ನೀಡಿದ ವಚನವನ್ನು ಮುರಿದವರಲ್ಲ ಎಂಬ ಹೆಗ್ಗಳಿಕೆ.

-------------------

ಪ್ರಧಾನ ಮಂತ್ರಿ ಹುದ್ದೆಗೆ ಹಲವರು ಆಕಾಂಕ್ಷಿಗಳಿದ್ದಾರೆ -ತೇಜಸ್ವಿ ಯಾದವ್, ಆರ್‌ಜೆಡಿ ಮುಖಂಡ

ಜಗಳ ಬೇಡ ಎಂದು ಜನರು ಮೋದಿಯನ್ನೇ ಚುನಾಯಿಸುವ ಸಾಧ್ಯತೆ ಇದೆ.

---------------------

ಮಾಧ್ಯಮಗಳ ಬಗ್ಗೆ ನಮಗೆ ದೊಡ್ಡ ಗೌರವವಿದೆ -ಡಿ.ಕೆ.ಶಿವಕುಮಾರ್, ಸಚಿವ

ಗೌರವದ ‘ನಗದು ಬೆಲೆ’ ಎಷ್ಟು ಎಂದು ಕೆಲ ಪತ್ರಕರ್ತರು ಕೇಳುತ್ತಿದ್ದಾರೆ.

---------------------

ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಲು ನನಗೇನು ಹುಚ್ಚು ಹಿಡಿದಿಲ್ಲ -ಎಚ್.ಡಿ. ರೇವಣ್ಣ, ಸಚಿವ

ತಮ್ಮನಿಗೆ ಹಿಡಿದಿದೆ ಎಂದು ಪರೋಕ್ಷ ಆರೋಪವೇ?

---------------------

ಹೆಚ್ಚಿನ ಸ್ಥಾನ ಕೊಟ್ಟರೆ ಮಾತ್ರ ಮಹಾಮೈತ್ರಿ, ಇಲ್ಲವಾದರೆ ನನ್ನ ದಾರಿ ನನಗೆ - ಮಾಯಾವತಿ, ಬಿಎಸ್ಪಿ ನಾಯಕಿ 

ಆ ದಾರಿ ನಿಮ್ಮನ್ನು ಮರಳಿ ಮನೆಗೆ ತಲುಪಿಸುವ ಸಾಧ್ಯತೆಯಿದೆ.

---------------------
ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕಾಂಗ್ರೆಸ್ ವಿಷ ಕುಡಿಸುತ್ತಿದೆ -ಪ್ರತಾಪ ಸಿಂಹ, ಸಂಸದ

ವಿಷ ಮಾರಾಟಗಾರನ ಪ್ರಲಾಪ.

---------------------

ಕಾಶ್ಮೀರ ಸಮಸ್ಯೆಗೆ ನೆಹರೂ ತಪ್ಪು ನಿರ್ಧಾರಗಳೇ ಕಾರಣ -ವಜೂಭಾಯಿವಾಲಾ, ರಾಜ್ಯಪಾಲ

ಪಿಡಿಪಿ ಜೊತೆಗೆ ಮೈತ್ರಿ ಮಾಡಿರುವುದು ನೆಹರೂ ಅಲ್ಲವಲ್ಲ?

---------------------

ನಾವು ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಪಾಕಿಸ್ತಾನವನ್ನು ನಾಲ್ಕು ಭಾಗಗಳನ್ನಾಗಿ ಮಾಡಬೇಕು - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ

ಭಾರತವನ್ನು ಭಾಗ ಮಾಡಿ ಯಶಸ್ವಿಯಾದವರ ಕನಸು.

---------------------

ಸಂಬಂಧ ಸುಧಾರಣೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದಿಡುತ್ತೇೆ- ಇಮ್ರಾನ್ ಖಾನ್, ಪಿಐಟಿ ಅಧ್ಯಕ್ಷ

ಹಿಂದಕ್ಕೋ, ಮುಂದಕ್ಕೋ ಎನ್ನುವುದರ ಬಗ್ಗೆ ಅನುಮಾನವಿದೆ.

--------------------

ನಾನು ಬಯಸಿದ್ದಲ್ಲಿ ನಿಮಿಷದಲ್ಲಿ ಮುಖ್ಯಮಂತ್ರಿಯಾಗಬಹುದು -ಹೇಮಮಾಲಿನಿ, ಸಂಸದೆ

ಹೌದು, ಒಳ್ಳೆಯ ನಿರ್ಮಾಪಕ ಸಿಕ್ಕಿದರೆ ಸಾಕು, ಯಾವುದೇ ಸಿನೆಮಾಗಳಲ್ಲಿ ಮುಖ್ಯಮಂತ್ರಿ ಪಾತ್ರವನ್ನು ಮಾಡಬಹುದು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು