varthabharthi

ಇ-ಜಗತ್ತು

ಇಲ್ಲಿದೆ ವಿವೋ ಫ್ಲ್ಯಾಶ್ ಸೇಲ್ ನ ಸಂಪೂರ್ಣ ಮಾಹಿತಿ

44,990 ರೂ. ಬೆಲೆಬಾಳುವ ವಿವೋ ‘ನೆಕ್ಸ್’ 1,947 ರೂ.ಗೆ!

ವಾರ್ತಾ ಭಾರತಿ : 6 Aug, 2018

ಹೊಸದಿಲ್ಲಿ, ಆ.6: ಪ್ರಮುಖ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ‘ವಿವೋ’ 72ನೇ  ಸ್ವಾತಂತ್ರ್ಯ ದಿನದ ಅಂಗವಾಗಿ ಭಾರತೀಯರಿಗೆ ತನ್ನ ಪ್ರಮುಖ ಫೋನ್ 44,990 ರೂ. ಬೆಲೆಬಾಳುವ ವೀವೊ ‘ನೆಕ್ಸ್’ ಫೋನ್ ಅನ್ನು ಕೇವಲ 1,947 ರೂ.ಗೆ ಆನ್ಲೈನ್ ಫ್ಲ್ಯಾಶ್ ಸೇಲ್ ಮೂಲಕ ಮಾರಾಟ ಮಾಡಲಿದೆ.

ಈ ಸ್ವಾತಂತ್ರ್ಯ ದಿನದ ಆಫರ್ ಆಗಸ್ಟ್ 7ರಿಂದ  ಆಗಸ್ಟ್ 9ರ ತನಕ ಕಂಪೆನಿಯ ಆನ್‍ ಲೈನ್ ಪೋರ್ಟಲ್ shop.vivo.com/in ಮೂಲಕ ಮಧ್ಯಾಹ್ನ 12 ಗಂಟೆಯಿಂದ ಲಭ್ಯವಾಗಲಿದೆ. ಆನ್ ಲೈನ್ ಪೇಮೆಂಟ್ ಮೂಲಕ ಪಾವತಿ ಮಾಡಬೇಕಾಗಿದ್ದು, 10 ನಿಮಿಷಗಳ ಕಾಲಾವಕಾಶವಿದೆ.

ಈ ಮೂರು ದಿನಗಳ ಸೇಲ್ ಸಂದರ್ಭ ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್, ಕೂಪನ್ ಡೀಲ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಗಳು ಆಯ್ದ ಶ್ರೇಣಿಯ ವಿವೋ ಸ್ಮಾರ್ಟ್ ಫೋನ್ ಮತ್ತಿತರ ಆಕ್ಸಸರೀಸ್  ಮೇಲೆ ಲಭ್ಯವಾಗಲಿದೆ.

ವಿವೋ ಇಯರ್ ಫೋನ್, ಯುಎಸ್‍ಬಿ ಚಾರ್ಜಿಂಗ್ ಕೇಬಲ್ ಗಳು ಕೇವಲ 72 ರೂ.ಗೆ ಹೆಚ್ಚುವರಿ ಕ್ಯಾಶ್ ಬ್ಯಾಕ್ ಆಫರ್ ಜತೆ ಲಭ್ಯವಾಗಲಿದ್ದು. ಸ್ಮಾರ್ಟ್ ಫೋನ್  ಮತ್ತು ಅಸ್ಸೆಸ್ಸರಿ ಸೇಲ್  ಮೂರೂ ದಿನಗಳಂದು ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡು ಸ್ಟಾಕ್ ಇರುವ ತನಕ ಮುಂದುವರಿಯಲಿದೆ.

‘ವೀವೊ ನೆಕ್ಸ್’ ಫೋನ್ 6.59 ಇಂಚು ಫುಲ್ ಎಚ್‍ಡಿ+ಬೀಝೆಲ್-ಲೆಸ್ ಡಿಸ್ಪ್ಲೇ ಹೊಂದಿದ್ದು, ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್, ಶಕ್ತಿಶಾಲಿ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಆನ್-ಬೋರ್ಡ್ ಸ್ಟೋರೇಜ್ ಹೊಂದಿರುತ್ತದೆ.

12+5 ಮೆಗಾ ಪಿಕ್ಸೆಲ್ ಡ್ಯುವೆಲ್ ಬ್ಯಾಕ್ ಕ್ಯಾಮರಾ ಸೆಟ್ ಅಪ್ ಹಾಗೂ 8 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮರಾವನ್ನು ಈ ಫೋನ್ ಹೊಂದಿದೆ. ಈ ಫೋನಿಗೆ 4,000 ಎಂಎಎಚ್ ಬ್ಯಾಟರಿ ಹಾಗೂ ಟೈಪ್ ಸಿ ಚಾರ್ಜಿಂಗ್ ವ್ಯವಸ್ಥೆಯಿದ್ದು ಅದು ಆಂಡ್ರಾಯ್ಡ್ 8.1 ಓರಿಯೊ ಮುಖಾಂತರ ವೀವೊ ಫನ್‍ಟಚ್ ಒಎಸ್ 4.0ನಲ್ಲಿ ಕಾರ್ಯಾಚರಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)