ತುಂಬೆ ಮೆಡಿಸಿಟಿ : ವೆದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಂಶೋಧನೆಯಲ್ಲಿ ಕ್ರಾಂತಿಕಾರಿ ಹೆಜ್ಜೆ
ತುಂಬೆ ಯುನಿವರ್ಸಿಟಿ ಆಸ್ಪತ್ರೆ ಸಂಕೀರ್ಣ, ಅಜ್ಮಾನ್
ಆರೋಗ್ಯ ಸೇವೆಯ ವಿಷಯದಲ್ಲಿ ಇಂದು ತುಂಬೆ ಗ್ರೂಪ್ ನಿಸ್ಸಂಶಯವಾಗಿ ಅತ್ಯಂತ ವಿಶ್ವಾಸಾರ್ಹ ಹೆಸರಾಗಿ ಹೊರಹೊಮ್ಮಿದೆ. ಉತ್ಕೃಷ್ಟ ಸೇವೆಗಳನ್ನು ಒದಗಿಸುತ್ತಿರುವ ಅದು ಇಂದು ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದಲ್ಲಿ ಅತ್ಯುತ್ತಮವಾದ ಮೂಲಸೌಕರ್ಯಗಳನ್ನು ಹೊಂದಿದೆ. ತುಂಬೆ ಸಮೂಹವು ಗಲ್ಫ್ ಪ್ರದೇಶದಲ್ಲಿ ಮೊದಲ ಖಾಸಗಿ ವ್ಯೆದ್ಯಕೀಯ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಯನ್ನು ಹೊಂದಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು)ಯ ಸ್ಥಾಪನೆ ಸೇರಿದಂತೆ ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಹಲವಾರು ಮಹತ್ವದ ಸಾಧನೆಗಳನ್ನು ಮಾಡಿದೆ. ಜಿಎಂಯು ಸ್ವತಹ ಒಂದು ವಿಶೇಷ ಯಶೋಗಾಥೆಯಾಗಿದೆ. ಡಾ.ತುಂಬೆ ಮೊಯ್ದೀನ್ ಅವರ ಕ್ರಿಯಾಶೀಲ ಮತ್ತು ನಿಸ್ವಾರ್ಥ ನಾಯಕತ್ವವಿಲ್ಲದಿದ್ದರೆ ಬಹುಶಃ ಇಂತಹ ಸಾಧನೆಯೊಂದು ನಮ್ಮ ಮುಂದಿರುತ್ತಿರಲಿಲ್ಲ. ಜೊತೆಗೆ ಅತ್ಯಾಧುನಿಕ ಉಪಕರಣಗಳು, ನಿಪುಣ ವೃತ್ತಿಪರರು ಮತ್ತು ಶ್ರೇಷ್ಠ ನಾಯಕತ್ವದ ಸ್ಫೂರ್ತಿ ಅದನ್ನು ಅಜೇಯವನ್ನಾಗಿಸಿವೆ.
ತುಂಬೆ ಗ್ರೂಪ್ನ ಆರಂಭ ಒಂದು ಅದ್ಭುತ ಕಥನವಾಗಿದೆ. ಹಿಂದೊಮ್ಮೆ ಡಾ.ತುಂಬೆ ಮೊಯ್ದೀನ್ ಅವರಿಗೆ ದುಬೈನಲ್ಲಿ ಪ್ರಯಾಣ ಸಂದರ್ಭದಲ್ಲಿ ಅಜ್ಮಾನ್ನ ರಾಜಮನೆತನದ ಸದಸ್ಯರೋರ್ವರು ಜೊತೆಯಾಗಿದ್ದರು. ಅಜ್ಮಾನ್ನಲ್ಲಿ ವೈದ್ಯಕೀಯ ಸೇವೆಗಳ ಕುರಿತು ಡಾ.ತುಂಬೆಯವರ ವಿವೇಚನಾಪೂರ್ಣ ಮಾತುಗಳು ಅವರ ಮೂಲಕ ಅಜ್ಮಾನ್ನ ಆಡಳಿತಗಾರರನ್ನು ತಲುಪಿದ್ದವು. ಅಲ್ಲಿಂದೀಚೆಗೆ ಡಾ.ತುಂಬೆಯವರು ಹಿಂದಿರುಗಿ ನೋಡಿದ್ದೇ ಇಲ್ಲ. ಅಜ್ಮಾನ್ ಎಮಿರೇಟ್ ಮತ್ತು ಯುಎಇಯ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಯ ಹರಿಕಾರರಾದ ಡಾ.ತುಂಬೆ ಯವರ ದೂರದೃಷ್ಟಿಯು ಇಡೀ ಪ್ರದೇಶದಲ್ಲಿ ನಿರಾಕರಿಸಲಾಗದ ಗೆಲುವನ್ನು ತಂದಿದ್ದು, ತುಂಬೆ ಗ್ರೂಪ್ನ ಆರೋಗ್ಯ ಸೇವೆಗಳು ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಲೇ ಇವೆ.
ತುಂಬೆ ಸಮೂಹವು ಇಂದು ಆಸ್ಪತ್ರೆಗಳು, ಕ್ಲಿನಿಕ್ಗಳು,ಫಾರ್ಮಸಿಗಳು, ಪ್ರಯೋಗಶಾಲೆಗಳ ಬೃಹತ್ ಜಾಲವನ್ನೇ ಹೊಂದಿದ್ದು, ಯುಎಇಯನ್ನು ವೈದ್ಯಕೀಯ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿಸುವ ಯೋಜನೆಯೊಂದು ರೂಪುಗೊಳ್ಳುತ್ತಿದೆ. ಸಾಗರೋತ್ತರ ವಿಸ್ತರಣೆಯ ಉದ್ದೇಶ ಹೊಂದಿರುವ ತುಂಬೆ ಗ್ರೂಪ್ ಈಗಾಗಲೇ ಹೈದರಾಬಾದ್ನಲ್ಲಿ ಆಸ್ಪತ್ರೆಯೊಂದನ್ನು ಹೊಂದಿದ್ದು ಓಮನ್, ಕತರ್ ಮತ್ತು ಆಫ್ರಿಕಾಗಳಲ್ಲಿ ಅದರ ಆಸ್ಪತ್ರೆಗಳು ತಲೆಯೆತ್ತುತ್ತಿವೆ. ಇದರ ಜೊತೆಗೆ ಯುಎಇ ಮತ್ತು ಭಾರತದಲ್ಲಿ ಇನ್ನಷ್ಟು ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಅಜ್ಮಾನ್ನಲ್ಲಿರುವ ತುಂಬೆ ಯುನಿವರ್ಸಿಟಿ ಆಸ್ಪತ್ರೆಯಲ್ಲಿ 500 ಹಾಸಿಗೆಗಳಿದ್ದು ಯುಎಇಯಲ್ಲಿ 1000 ಹಾಸಿಗೆಗಳ ಆಸ್ಪತ್ರೆಯನ್ನು ಹೊಂದುವ ಮೂಲಕ ಗಲ್ಫ್ ಪ್ರದೇಶದಲ್ಲಿ ಅತ್ಯಂತ ದೊಡ್ಡ ಖಾಸಗಿ ಶೈಕ್ಷಣಿಕ ಆಸ್ಪತ್ರೆಗಳ ಜಾಲವಾಗುವ ನಿಟ್ಟಿನಲ್ಲಿ ತುಂಬೆ ಗ್ರೂಪ್ ಮುನ್ನಡೆಯುತ್ತಿದೆ. ತುಂಬೆ ಡೆಂಟಲ್ ಕಾಲೇಜ್ ಮತ್ತು ತುಂಬೆ ಫಿಜಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಷನ್ ಸೆಂಟರ್ ಆರೋಗ್ಯ ಕ್ಷೇತ್ರದಲ್ಲಿ ಅದರಇತರ ಅದ್ಭುತ ಸಾಧನೆಗಳಾಗಿವೆ. ಜಿಎಂಯು ಮತ್ತು ಅದರ ಬೋಧನಾ ಆಸ್ಪತ್ರೆಗಳ ಜಾಲವು ಶೇ.20ರಷ್ಟು ವೈದ್ಯರನ್ನು ಮತ್ತು ಶೇ.60ರಷ್ಟು ಆರೋಗ್ಯ ಸೇವೆ ವೃತ್ತಿಪರರನ್ನು ಸಿದ್ಧಗೊಳಿಸುತ್ತಿದೆ.
1998ರಲ್ಲಿ ಸ್ಥಾಪನೆಗೊಂಡ ಜಿಎಂಯು 80ಕ್ಕೂ ಅಧಿಕ ದೇಶಗಳ ಅಂತರ್ರಾಷ್ಟ್ರೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ಅದು ಎಂಬಿಬಿಎಸ್, ಬ್ಯಾಚುಲರ್ ಆಫ್ ಬಯೊಮೆಡಿಕಲ್ ಸಯನ್ಸಸ್, ಅಸೋಸಿಯೇಟ್ ಡಿಗ್ರಿ ಇನ್ ಪ್ರಿ-ಕ್ಲಿನಿಕಲ್ ಸಯನ್ಸಸ್, ಡಾಕ್ಟರ್ ಆಫ್ ಡೆಂಟಲ್ ಮೆಡಿಸಿನ್, ಡಾಕ್ಟರ್ ಆಫ್ ಫಾರ್ಮಸಿ, ಬ್ಯಾಚುಲರ್ ಆಫ್ ಫಿಜಿಯೊಥೆರಪಿ, ಬ್ಯಾಚುಲರ್ ಆಫ್ ಹೆಲ್ತ್ ಸಯನ್ಸ್ ಇನ್ ಅನೆಸ್ಥೇಶಿಯಾ ಆ್ಯಂಡ್ ಸರ್ಜಿಕಲ್ ಟೆಕ್ನಾಲಜಿ, ಮೆಡಿಕಲ್ ಲ್ಯಾಬೋರೇಟರಿ ಸಯನ್ಸಸ್, ಮೆಡಿಕಲ್ ಇಮೇಜಿಂಗ್ ಸಯನ್ಸಸ್ ಮತ್ತು ನರ್ಸಿಂಗ್ನಲ್ಲಿ ಬ್ಯಾಚುಲರ್ ಆಫ್ ಸಯನ್ಸ್ನಂತಹ ವಿವಿಧ ಕೋರ್ಸ್ಗಳನ್ನು ನಡೆಸುತ್ತಿದೆ. ಇವುಗಳ ಜೊತೆಗೆ ಪಬ್ಲಿಕ್ ಹೆಲ್ತ್ ಮತ್ತು ಫಿಜಿಕಲ್ ಥೆರಪಿಗಳಲ್ಲಿ ಮಾಸ್ಟರ್ಸ್ ಪ್ರೋಗ್ರಾಮ್ಗಳನ್ನೂ ನೀಡುತ್ತಿದೆ. ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ತುಂಬೆ ಗ್ರೂಪ್ನ ಚಿಂತನೆಗೆ ಅನುಗುಣವಾಗಿ ಜಿಎಂಯು ಮತ್ತು ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳು ವಿದ್ಯಾರ್ಥಿಗಳನ್ನು ಮತ್ತು ರೋಗಿಗಳನ್ನು ಆಕರ್ಷಿಸುವಲ್ಲಿ ಆಯಸ್ಕಾಂತದಂತೆ ಕಾರ್ಯ ನಿರ್ವಹಿಸುತ್ತಿವೆ ಮತ್ತು ವ್ಯೆದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗಿ ಯುಎಇಯ ವರ್ಚಸ್ಸನ್ನು ಬೆಳೆಸುವಲ್ಲಿ ವೇಗವರ್ಧಕದ ಪಾತ್ರವನ್ನು ನಿಭಾಯಿಸುತ್ತಿವೆ. ಇದೇ ಕಾರಣದಿಂದ ಜಿಎಂಯು ಮಧ್ಯಪ್ರಾಚ್ಯದ 50 ಅತ್ಯುನ್ನತ ವೈದ್ಯಕೀಯ ವಿವಿಗಳಲ್ಲಿ ಒಂದಾಗಿದೆ ಮತ್ತು 2018ರ ಪ್ರತಿಷ್ಠಿತ ಶೇಖ್ ಖಲೀಫಾ ಶ್ರೇಷ್ಠತಾ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
(ಪ್ರತೀ ದಿನ 20,000 ಜನರಿಗೆ ಆರೋಗ್ಯ ಸೇವೆ ನೀಡಲಿರುವ ತುಂಬೆ ಮೆಡಿಸಿಟಿ)
ಸಂತಸದ ವಿಷಯವೆಂದರೆ ಜಿಎಂಯು ಇದರ ಶೈಕ್ಷಣಿಕ ಆರೋಗ್ಯ ಸೇವೆಯ ವ್ಯವಸ್ಥೆಯು ತನ್ನದೇ ಆದ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಗಳೊಂದಿಗೆ ತಳುಕು ಹಾಕಿಕೊಂಡಿದ್ದು, ಅಪ್ಪಟ ಸ್ವದೇಶಿಯಾಗಿದೆ. ತುಂಬೆ ಗ್ರೂಪ್ ಮತ್ತು ಜಿಎಂಯುಗಳು 21ನೇ ಶತಮಾನದಲ್ಲಿ ಸ್ಥಳೀಯವಾಗಿ ಬೆಳೆದ ಆರೋಗ್ಯ ರಕ್ಷಣೆ ಹೆಗ್ಗುರುತುಗಳು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಗಳ ಮಾನ್ಯತೆ ಮತ್ತು ಸಂಯೋಜನೆಯೊಂದಿಗೆ ವಿಶ್ವವ್ಯಾಪಿ ಸಂಶೋಧನೆ ಮತ್ತು ನವೀನತೆಯ ಭಾಗವಾಗಿವೆ ಎಂದು ಯುಎಇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ತುಂಬೆ ಗ್ರೂಪ್ ತನ್ನ ಆಸ್ಪತ್ರೆಗಳಿಗೆ ಜೆಸಿಐ ಮಾನ್ಯತೆಯನ್ನು ಹೊಂದಿದ್ದು, ಸಿಎಪಿ ಮಾನ್ಯತೆಯ ಪ್ರಯೋಗಶಾಲೆಗಳೊಂದಿಗೆ ವಿಶ್ವದ ಹಲವಾರು ಪ್ರತಿಷ್ಠಿತಸಂಶೋಧನಾ ಮತ್ತು ಆರೋಗ್ಯಸಂಸ್ಥೆಗಳ ಮನ್ನಣೆಗೆ ಪಾತ್ರವಾಗಿದೆ ಎನ್ನುತ್ತಾರೆ ಅಂತರ್ರಾಷ್ಟ್ರೀಯ ಖ್ಯಾತಿಯ ವೈದ್ಯಕೀಯ ಬೋಧಕ ಮತ್ತು ಪೀಡಿಯಾಟ್ರಿ್ ಸರ್ಜನ್ ಪ್ರೊ.ಹೊಸ್ಸಮ್ ಹಮ್ದಿ.
ಜಿಎಂಯು ಅಧೀನದಲ್ಲಿ ಆರು ಕಾಲೇಜುಗಳು ಮತ್ತು ತುಂಬೆ ರೀಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಪ್ರಿಸಿಷನ್ ಮೆಡಿಸಿನ್,ತುಂಬೆ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಷನ್ ಹೆಲ್ತ್ ಮತ್ತು ತುಂಬೆ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ಕೇರ್ ವರ್ಕ್ಫೋರ್ಸ್ ಡೆವಲಪ್ಮೆಂಟ್ ಇವೆ. ಸಂಶೋಧನೆ, ಸ್ನಾತಕೋತ್ತರ ಅಧ್ಯಯನಮತ್ತು ನಿರಂತರ ವೃತ್ತಿಪರ ಅಭಿವೃದ್ಧಿ ಸೇರಿದಂತೆ ವಿಶಾಲ ಶ್ರೇಣಿಯ ಬೋಧನಾ ಅಗತ್ಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಎಂಯು ಇದರ ನೂತನ ಕಾಲೇಜುಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೆಲ್ಲೂ ಇರದ ಆರೋಗ್ಯ ಸೇವೆ ವ್ಯವಸ್ಥಾಪನೆ ಮತ್ತು ಆರೋಗ್ಯ ಅರ್ಥಶಾಸ್ತ್ರದ ಕಾಲೇಜುಗಳು ಸೇರಿವೆ. ವಿವಿಯು ನೂತನ ನರ್ಸಿಂಗ್ ಕಾಲೇಜನ್ನೂ ಹೊಂದಿದೆ. ಜಿಎಂಯು ಇದರ ವಿಶಿಷ್ಟ ಕಾರ್ಯಕ್ರಮಗಳಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಜಂಟಿ ಮತ್ತು ದ್ವಂದ್ವ ಮಾಸ್ಟರ್ಸ್ ಪ್ರೋಗ್ರಾಮ್ಗಳೂ ಸೇರಿವೆ. ಹೀಗಾಗಿ ಚಿಕಿತ್ಸೆ, ಆರೋಗ್ಯ ಸೇವೆ ಮತ್ತು ಶೈಕ್ಷಣಿಕ ಪಾರಮ್ಯಕ್ಕೆ ಸಂಬಂಧಿಸಿದಂತೆ ತುಂಬೆ ಗ್ರೂಪ್ ಒಂದು ಬ್ರಾಂಡ್ ಗುರುತು ಆಗಿದೆ.
ತುಂಬೆ ಗ್ರೂಪ್ ಇಂದು ಯುಎಇಯಲ್ಲಿ ಆದ್ಯತೆಯ ಮತ್ತು ವಿಶ್ವಾಸಾರ್ಹ ಆರೋಗ್ಯ ಸೇವೆಯ ವ್ಯವಸ್ಥೆಯಾಗಿ ಬೆಳೆದಿರುವ ಜೊತೆಗೆ ಮಧ್ಯಪ್ರಾಚ್ಯ ಪ್ರದೇಶದಾದ್ಯಂತ ಮೌಲಿಕ ಸಂಸ್ಥೆಯಾಗಿರುವುದು ಅಚ್ಚರಿಯೇನಲ್ಲ. ಅದು ಎಲ್ಲ ಕಡೆಗಳಲ್ಲಿಯೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಸಂಶೋಧನೆಯು ತುಂಬೆ ಗ್ರೂಪ್ನ ಶ್ರೇಷ್ಠತೆಯ ಚಿಹ್ನೆಯಾಗಿದ್ದು, ತುಂಬೆ ರೀಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಪ್ರಿಸಿಷನ್ ಮೆಡಿಸಿನ್ಅನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಬೋಧಕ ವೃಂದ, ವಿದ್ಯಾರ್ಥಿಗಳು, ಉದ್ಯಮ ಮತ್ತು ತನ್ನ ಅಧೀನದಲ್ಲಿರುವ ಹಲವಾರು ಆಸ್ಪತ್ರೆಗಳ ನಡುವಿನ ಸಹಭಾಗಿತ್ವದ ವ್ಯಾಪ್ತಿಯನ್ನು ವಿಸ್ತರಿಸುವುದು ಅದರ ಉದ್ದೇಶವಾಗಿದೆ. ತುಂಬೆ ಗ್ರೂಪ್ ಕೇವಲ ಆಸ್ಪತ್ರೆ ಮತ್ತು ಕ್ಲಿನಿಕ್ ಅಲ್ಲ, ಅದು ವೈದ್ಯಕೀಯ ಕ್ಷೇತ್ರ ಮತ್ತು ವೃತ್ತಿಪರರ ಏಳಿಗೆಗಾಗಿ ತನ್ನೆಲ್ಲ ಸಹಕ್ರಿಯೆಗಳನ್ನು ಧಾರೆಯೆರೆಯುತ್ತಿರುವ ಮೌಲಿಕ ಆರೋಗ್ಯ ವ್ಯವಸ್ಥೆಯಾಗಿದೆ ಮತ್ತು ಗುಣಮಟ್ಟದ ವೈದ್ಯಕೀಯ ಶಿಕ್ಷಣ ಹಾಗೂ ಸಮಗ್ರ ಕ್ಲಿನಿಕಲ್ ಕಾಳಜಿಯ ಮಾರ್ಗಸೂಚಿಯನ್ನು ಹೊಂದಿದೆ. ತುಂಬೆ ಆರೋಗ್ಯ ಸೇವೆಗಳನ್ನು ಒದಗಿಸುವಾಗ ಮತ್ತು ತನ್ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಶಿಕ್ಷಣ ನೀಡುವಾಗ ಪರಿಕಲ್ಪನೆಯ ವಿಷಯವಾಗಿ ಅವುಗಳನ್ನು ಸಂಪೂರ್ಣವಾಗಿ ಒಂದು ಉದ್ಯಮದಂತೆ ಪರಿಗಣಿಸುತ್ತದೆ. ಇದು ಪರಸ್ಪರ ಸಂಬಂಧಿತವಾಗಿದ್ದು, ಭವಿಷ್ಯದ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶ ಹೊಂದಿದೆ. ಜಿಎಂಯು 15ಕ್ಕೂ ಹೆಚ್ಚಿನ ಕೋರ್ಸ್ಗಳನ್ನು ಒದಗಿಸುತ್ತಿದ್ದು, ವಿಶ್ವಾದ್ಯಂತದ ಹಲವಾರು ಪ್ರತಿಷ್ಠಿತ ವಿವಿಗಳೊಂದಿಗೆ ಸದೃಢ ಸಹಭಾಗಿತ್ವವನ್ನು ಹೊಂದಿದೆ. ಯುನಿವರ್ಸಿಟಿ ಆಫ್ ಅರಿರೆನಾ, ವರ್ಜೀನಿಯಾ ಕಾಮನ್ವೆಲ್ತ್ ಯುನಿವರ್ಸಿಟಿ, ಅಮೆರಿಕದ ಮಿಲ್ವಾಕಿಯ ಮೆಡಿಕಲ್ ಕಾಲೇಜ್ ಆಫ್ ವಿಸ್ಕನ್ಸಿನ್, ಕನೆಕ್ಟಿಕಟ್ನ ಯುನಿವರ್ಸಿಟಿ ಆಫ್ ಸೈಂಟ್ ಜೋಸೆಫ್ ಸ್ಕೂಲ್ ಆಫ್ ಫಾರ್ಮಸಿ, ಜರ್ಮನ್ ಹೈಡೆಲ್ಬರ್ಗ್ ಯುನಿವರ್ಸಿಟಿ, ಕೈರೋದ ಅಮೆರಿಕನ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ಘಾನಾ, ಮೆಡಿಕಲ್ ಯುನಿವರ್ಸಿಟಿ ಆಫ್ ಲುಬ್ಲಿನ್, ಟೋಕಿಯೊ ಮೆಡಿಕಲ್ ಆ್ಯಂಡ್ ಡೆಂಟಲ್ ಯುನಿವರ್ಸಿಟಿ ಇಂತಹ ಕೆಲವು ವಿವಿಗಳಾಗಿವೆ.ಅಲ್ಲದೆ ಫ್ರಾನ್ಸ್ನ ಗುಸ್ತಾವ್ ರಾಸ್ಸಿ ಕ್ಯಾನ್ಸರ್ ರೀಸರ್ಚ್ ಇನ್ಸ್ಟಿಟ್ಯೂಟ್ನಂತಹ ಸಂಶೋಧನಾ ಸಂಸ್ಥೆಗಳೊಂದಿಗೂ ಸಹಭಾಗಿತ್ವ ಹೊಂದಿದೆ.
(ಗಲ್ಫ್ ಮೆಡಿಕಲ್ ಯುನಿವರ್ಸಿಟಿ)
ಜಿಎಂಯು ಭವಿಷ್ಯದ ವೈದ್ಯಕೀಯ ವಿವಿಯಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪ್ರೊ.ಹಮ್ದಿ. ಕಾರಣ ಸರಳವಾಗಿದೆ: 2025ರ ವೇಳೆಗೆ ಜಿಎಂಯು ಅನ್ನು ಸಂಶೋಧನೆ ಆಧರಿತ ವಿವಿಯನ್ನಾಗಿ ಪರಿವರ್ತಿಸುವ ದೂರದೃಷ್ಟಿಯನ್ನು ತುಂಬೆ ಗ್ರೂಪ್ ಹೊಂದಿದೆ. ತುಂಬೆಯ ಪ್ರಿಸಿಷನ್ ಮೆಡಿಕಲ್ ಇನ್ಸ್ಟಿಟ್ಯೂಟ್ ದಾಪುಗಾಲು ಗಳೊಂದಿಗೆ ಮುನ್ನಡೆಯುತ್ತಿದೆ. ಅದು ಕ್ಯಾನ್ಸರ್ ರೋಗಿಗಳಿಗೆ ನೂತನ ಔಷಧಿ ಮತ್ತು ಚಿಕಿತ್ಸೆಯನ್ನು ಆವಿಷ್ಕರಿಸುವ ತನ್ನ ಗುರಿಗೆ ನಿಕಟವಾಗುತ್ತಿದೆ. ಚಿಕಿತ್ಸಾ ವಿಧಾನಗಳಲ್ಲಿ ವೈವಿಧ್ಯತೆಯನ್ನು ತರುವುದು ಸಂಶೋಧನೆಯ ಭಾಗವಾಗಿದೆ. ಇದು ತುಂಬೆ ಗ್ರೂಪ್ ಮತ್ತು ಜಿಎಂಯು ಪಾಲಿಗೆ ಪವಾಡಕ್ಕಿಂತ ಕಡಿಮೆಯಲ್ಲ ಮತ್ತು ಯುಎಇಪಾಲಿಗೂ ಹೆಮ್ಮೆಯ ವಿಷಯವಾಗಿದೆ ಎನ್ನುತ್ತಾರೆ ಪೊ.ಹಮ್ದಿ.
ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ತುಂಬೆ ಸಮೂಹದ ಹೂಡಿಕೆಯು ಭವಿಷ್ಯದ ಗುರಿಯನ್ನು ಹೊಂದಿದೆ. ರೋಗಿಯ ತೃಪ್ತಿಯೊಂದೇ ಅದರ ಉದ್ದೇಶವಲ್ಲ. ಬದಲಾಗಿ ಭವಿಷ್ಯದ ವೈದ್ಯಕೀಯ ವೃತ್ತಿಪರರನ್ನು ರೂಪಿಸುವುದಕ್ಕಾಗಿ, ಸುಭದ್ರ ಮೂಲಸೌಕರ್ಯ ಸ್ಥಾಪಿಸಲು, ಯುಎಇ, ಮಧ್ಯಪ್ರಾಚ್ಯ ಪ್ರದೇಶ ಮತ್ತು ಅದರಾಚೆಗೂ ಸೇವೆಗಳನ್ನು ಸಲ್ಲಿಸಲು ಸಂಶೋಧನೆ ಮತ್ತು ನವೀನತೆಗಳನ್ನು ತನ್ನ ಪ್ರಣಾಳಿಕೆಯ ಪ್ರಮುಖ ಆದ್ಯತೆಗಳನ್ನಾಗಿಸಲು ಸಂಪೂರ್ಣ ಮಾರ್ಗಸೂಚಿಯನ್ನು ಅದು ಹೊಂದಿದೆ.
ಭವಿಷ್ಯದ ವಿಶಿಷ್ಟ ಆರೋಗ್ಯ ಸೇವೆಯ ಮಾದರಿ ನಿರ್ಮಾಣ
ಸಂಶೋಧನೆ ಹಾಗೂ ವೈದ್ಯಕೀಯ ಪ್ರವಾಸೋದ್ಯಮದಲ್ಲಿ ನೀಡುತ್ತಿರುವ ಅತ್ಯಾಧುನಿಕ ಸೌಲಭ್ಯಗಳು ಡಾ. ತುಂಬೆ ಮೊಯ್ದೀನ್ ಅವರ ಉತ್ಸಾಹಕ್ಕೆ ಮಿತಿ ಇಲ್ಲ ಎಂಬುದಕ್ಕೆ ಸಾಕ್ಷಿ.
(ಡಾ.ತುಂಬೆ ಮೊಯ್ದೀನ್, ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷ)
ತುಂಬೆ ಸಮೂಹದ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಅವರು ವಿಶಾಲ ದೃಷ್ಟಿಕೋನದಲ್ಲಿ ಮತ್ತು ಅದೂ ವಿನಮ್ರ ರೀತಿಯಲ್ಲಿ ತನ್ನ ಅಭಿಪ್ರಾಯಗಳನ್ನು ಸ್ಪಷ್ಟ ಮಾತುಗಳಲ್ಲಿ ಹೇಳುವುದರಲ್ಲಿ ನಂಬಿಕೆಯನ್ನು ಹೊಂದಿದ್ದಾರೆ. ಅತ್ಯಾಧುನಿಕ ಆರೋಗ್ಯ ಸೇವೆ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಅವರ ಕನಸಾಗಿದೆ. ಯುಎಇಯ ಮೊದಲ ಸ್ಥಳೀಯ ವೈದ್ಯಕೀಯ ವಿವಿಯನ್ನು ಮತ್ತು ತಮ್ಮ ಅಸಾಧಾರಣ ಸೇವೆಗಳಿಗಾಗಿ ಖ್ಯಾತ ಆಸ್ಪತ್ರೆಗಳ ಸ್ಥಾಪನೆಯಲ್ಲಿ ಅವರು ಯಾವುದೇ ದಿಢೀರ್ ಮಾನದಂಡಗಳನ್ನು ನಿಗದಿ ಪಡಿಸಿದ್ದಲ್ಲ.
ವಾರ್ತಾಭಾರತಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಡಾ.ತುಂಬೆ ಅವರು, ನಾವು ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿರುವುದು ನಮ್ಮನ್ನು ಇತರರಿಗಿಂತ ಭಿನ್ನವಾಗಿಸಿದೆ. ರೋಗಗಳಿಗೆ ಚಿಕಿತ್ಸೆಯಿಂದ ಹಿಡಿದು ವೈದ್ಯರಿಗೆ ಬೋಧನೆ ಮತ್ತು ವೃತ್ತಿಪರ ಸಂಶೋಧನೆಯಲ್ಲಿ ತೊಡಗಿಕೊಳ್ಳುವವರೆಗೆ ಆರೋಗ್ಯ ರಕ್ಷಣೆಗೆ ಸಂಬಂಧಿತ ವ್ಯಾಪಕ ವಿಷಯಗಳಲ್ಲಿ ನಾವು ಸಕ್ರಿಯರಾಗಿದ್ದೇವೆ. ನಮ್ಮನ್ನು ಸರಿಗಟ್ಟಲು ಯಾರಿಗೂ ಸಾಧ್ಯವಿಲ್ಲ. ನಾವು ಇತರರಷ್ಟು ದೊಡ್ಡವರಲ್ಲದಿರಬಹುದು, ಆದರೆ ನಾವು ಅಜೇಯರಾಗಿದ್ದೇವೆ ಎಂದು ಹೇಳಿದ್ದಾರೆ.
ಯುಎಇ ಒಂದು ಅದ್ಭುತ ಮತ್ತು ಎಲ್ಲರಿಗೂ ಅವಕಾಶಗಳಿಂದ ತುಂಬಿರುವ ದೇಶವಾಗಿದೆ ಎಂದ ಡಾ.ತುಂಬೆ ಅವರು, ರೋಗಿಗಳು ತಮ್ಮ ಸಂಪೂರ್ಣ ವಿಶ್ವಾಸವನ್ನಿಡಬಹುದಾದ ಆಸ್ಪತ್ರೆಗಳಿಂದ ಕ್ಲಿನಿಕ್ಗಳವರೆಗೆ, ಫಾರ್ಮಸಿಗಳಿಂದ ಲ್ಯಾಬೊರೇಟರಿಗಳವರೆಗೆ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಜಾಲವೊಂದನ್ನು ರೂಪಿಸುವಲ್ಲಿ ನಾವು ವ್ಯಸ್ತರಾಗಿದ್ದೇವೆ ಎಂದರು.
ಡಾ.ತುಂಬೆಯವರು ಅಭಿವೃದ್ಧಿ ವಿಷಯಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಮತ್ತು ಅವುಗಳನ್ನು ಸಾಧಿಸುವ ದೂರದೃಷ್ಟಿ ಹೊಂದಿರುವುದರಿಂದ ಅವರಿಗೆ ಆಕಾಶವೇ ಮಿತಿಯಾಗಿದೆ. ತುಂಬೆ ಸಮೂಹದ ವ್ಯೆಹಾತ್ಮಕ ಯೋಜನೆಯಂತೆ ತುಂಬೆ ಶೈಕ್ಷಣಿಕ ಆಸ್ಪತ್ರೆ ಜಾಲವು 2022ರ ವೇಳೆಗೆ ಯುಎಇಯಲ್ಲಿ ಒಟ್ಟು 1000, ಭಾರತದಲ್ಲಿ 1500 ಮತ್ತು ಕೊಲ್ಲಿಯ ಇತರ ಕಡೆಗಳಲ್ಲಿ ಮತ್ತು ಆಫ್ರಿಕಾದಲ್ಲಿ 750 ಹಾಸಿಗೆಗಳ ಆಸ್ಪತ್ರೆಗಳು ಹಾಗೂ ಜೊತೆಗೆ ವಿವಿಧ ದೇಶಗಳಲ್ಲಿ ಮೂರು ನೂತನ ವಿವಿ ಕ್ಯಾಂಪಸ್ಗಳನ್ನು ಸ್ಥಾಪಿಸಲಿದೆ.
ಯುಎಇಯನ್ನು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಆರೋಗ್ಯ ಸೇವೆಯ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಲು ನಾವು ಇಲಾಖೆಗಳೊಂದಿಗೆ ಕೂಡಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಆರೋಗ್ಯ ರಕ್ಷಣೆ ಮಾದರಿಗಳು ಉಳಿದವರಿಗಿಂತ ಭಿನ್ನವಾಗಿವೆ. ಅದು ಸಮಗ್ರವಾಗಿದ್ದು, ಹೊಸತನದಿಂದ ಕೂಡಿದೆ ಮತ್ತು ಹೆಚ್ಚು ಸ್ವದೇಶಿಯಾಗಿದೆ ಎಂದು ಡಾ.ತುಂಬೆ ಹೇಳಿದರು.
ಯುಎಇ ತನ್ನ ಬ್ರಾಂಡ್ಗಳನ್ನು ಶ್ರೇಷ್ಠತೆಯ ಮಾದರಿಯನ್ನಾಗಿಸುತ್ತದೆ. ನಾವು ಮಾತ್ರ ಸ್ಥಳೀಯವಾಗಿ ಮೂಡಿ ಬಂದಿದ್ದೇವೆ. ನಮ್ಮ ಸಾಗರೋತ್ತರ ವಿಸ್ತರಣೆ ಯೋಜನೆಗಳು ಯುಎಇಗೆ ಹೆಮ್ಮೆಯ ವಿಷಯಗಳಾಗಿವೆ ಎಂದ ಅವರು, ಆಫ್ರಿಕಾ, ಇರಾನ್, ಭಾರತ, ಬಾಂಗ್ಲಾದೇಶ ಮತ್ತು ಇತರ ಗಲ್ಫ್ ರಾಷ್ಟ್ರಗಳ ರೋಗಿಗಳನ್ನು ಆಕರ್ಷಿಸಲು ವೈದ್ಯಕೀಯ ಪ್ರವಾಸೋದ್ಯಮದ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿದೆ ಎಂದರು.
ಡಾ.ತುಂಬೆ ಅವರು ಅಜ್ಮಾನ್ನಲ್ಲಿರುವ ತನ್ನ ‘ಮೆಡಿಸಿಟಿ’ಯ ಕುರಿತೂ ಮಾತನಾಡಿದರು. ಮೆಡಿಕಲ್ ವಿವಿ ಕ್ಯಾಂಪಸ್, ಸಿಬ್ಬಂದಿ, ಬೋಧಕ ವೃಂದ ಮತ್ತು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಆಸ್ಪತ್ರೆ ಮತ್ತು ಇತರ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿರುವ ಮೆಡಿಸಿಟಿಯಲ್ಲಿ ಸದಾ 20,000ಕ್ಕೂ ಅಧಿಕ ಜನರ ಚಲನವಲನವಿರುತ್ತದೆ.
ನೀವು ನಿಮ್ಮ ಪಾತ್ರವನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ನಿರ್ವಹಿಸುತ್ತೀರಿ ಎಂಬ ಪ್ರಶ್ನೆಗೆ ಡಾ.ತುಂಬೆ ಅವರು, ನಾನು ಕೇವಲ ನೆರವು ನೀಡುವ ವ್ಯಕ್ತಿಯಾಗಿದ್ದೇನೆ. ಯಶಸ್ಸನ್ನು ಸಾಧಿಸುವಂತೆ ಮತ್ತು ನಾವು ಹೊಂದಿರುವ ಅತ್ಯುನ್ನತ ಗುರಿಗಳ್ನು ತಲುಪುವಂತೆ ನೋಡಿಕೊಳ್ಳುವುದು ನನ್ನ ಲಕ್ಷವಾಗಿದೆ. ನನ್ನೊಂದಿಗೆ ಅತ್ಯಂತ ಪ್ರಬುದ್ಧ ತಂಡವಿದೆ ಮತ್ತು ಅವರು ತಮ್ಮ ಸ್ವಂತ ಸಾಮರ್ಥ್ಯದಲ್ಲಿ ಉತ್ತಮ ನಾಯಕರಾಗಿದ್ದಾರೆ. ನಿಯಮಿತವಾಗಿ ನಾವು ಚಿಂತನಾ ಸಭೆಗಳನ್ನು ನಡೆಸುತ್ತಿರುತ್ತೇವೆ ಮತ್ತು ನಾನು ನನ್ನಿಂದಾದ ಎಲ್ಲ ನೆರವುಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ. ಉದ್ದೇಶಿತ ಯೋಜನೆಯು ನನ್ನ ಹೃದಯಕ್ಕೆ ತುಂಬ ಆಪ್ತವಾಗಿದೆ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದರು.
ಹೊಸತನದ ಮೂಲಕ ಶ್ರೇಷ್ಠತೆಯತ್ತ ಪಯಣ
ಈ ಪ್ರದೇಶದಲ್ಲೇ ಶ್ರೇಷ್ಠ ಆರೋಗ್ಯ ಸೇವೆಯ ವ್ಯವಸ್ಥೆ ರೂಪಿಸುವುದು ಅಕ್ಬರ್ ಮೊಯ್ದೀನ್ ತುಂಬೆ ಅವರ ದೃಷ್ಟಿಕೋನ.
ಅಕ್ಬರ್ ಮೊಯ್ದೀನ್ ತುಂಬೆ, ತುಂಬೆ ಗ್ರೂಪ್ನ ಉಪಾಧ್ಯಕ್ಷ
(ಆರೋಗ್ಯ ಸೇವಾ ವಿಭಾಗ) ಮತ್ತು ಆಡಳಿತ ಮಂಡಳಿ ಸದಸ್ಯ
ತುಂಬೆ ಮೆಡಿಸಿಟಿಯ ಉಜ್ವಲ ಭವಿಷ್ಯಕ್ಕಾಗಿ ಅವಿರತವಾಗಿ ದುಡಿಯುವ ತನ್ನ ಕಾರ್ಯಸೂಚಿಯ ಬಗ್ಗೆ ಮಾತನಾಡಿದ ತುಂಬೆ ಸಮೂಹದ ಉಪಾಧ್ಯಕ್ಷ (ಆರೋಗ್ಯ ಸೇವಾ ವಿಭಾಗ) ಮತ್ತು ಆಡಳಿತ ಮಂಡಳಿಯ ಸದಸ್ಯ ಅಕ್ಬರ್ ಮೊಯ್ದೀನ್ ತುಂಬೆ ಅವರು ತನ್ನ ವಿಚಾರಗಳನ್ನು ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ಹೇಳಿದರು.
ಯುಎಇಯಲ್ಲಿನ ಏಕಮೇವ ಖಾಸಗಿ ಶೈಕ್ಷಣಿಕ ಆಸ್ಪತ್ರೆಯ ಭಾಗವಾಗಿರುವ ಮಧ್ಯಪ್ರಾಚ್ಯದಲ್ಲಿನ ತ್ವರಿತ ಗತಿಯಿಂದ ಬೆಳೆಯುತ್ತಿರುವ ಆಸ್ಪತ್ರೆಗಳು, ಕ್ಲಿನಿಕ್ಗಳು, ಫಾರ್ಮಸಿಗಳು ಮತ್ತು ಲ್ಯಾಬೊರೇಟರಿಗಳ ಜಾಲವನ್ನು ನೊಡಿಕೊಳ್ಳುತ್ತಿರುವ ಅವರು, ಯುಎಇಯಲ್ಲಿನ ಏಕೈಕ ಬೋಧನಾ ಆಸ್ಪತ್ರೆಯು ನಮ್ಮ ಹೆಗ್ಗುರುತಾಗಿದೆ ಮತ್ತು ಆ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲ, ಜಿಎಂಯುನಲ್ಲಿ ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗಳ ಮೂಲಕ ವೃತ್ತಿಪರ ಪಾರಮ್ಯತೆಯಲ್ಲಿಯೂ ತೊಡಗಿಕೊಂಡಿದ್ದಾರೆ ಎಂದರು.
2002ರಲ್ಲಿ ಅಜ್ಮಾನ್ನಲ್ಲಿ ಒಂದು ಆಸ್ಪತ್ರೆಯೊಂದಿಗೆ ಆರಂಭಗೊಂಡಿದ್ದ ತುಂಬೆ ಗ್ರೂಪ್ ಸುದೀರ್ಘ ದೂರವನ್ನು ಕ್ರಮಿಸಿದೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ತುಂಬೆ ಗ್ರೂಪ್ ಕ್ರಾಂತಿಕಾರಿ ಕೊಡುಗೆ ನೀಡಿದೆ ಎಂದ ಅಕ್ಬರ್ ಮೊಯ್ದೀನ್ ಅವರು, ಯುಎಇಯನ್ನು ಆರೋಗ್ಯ ಸೇವೆ ಮತ್ತು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಲು ನಮ್ಮ ಪ್ರತಿನಿಧಿ ಅಧಿಕಾರಿಗಳು 87 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಲಿ ನಾವು ಪ್ರತಿದಿನ ಸರಾಸರಿ 10ಕ್ಕೂ ಅಧಿಕ ಅಂತರ್ರಾಷ್ಟ್ರೀಯ ರೋಗಿಗಳನ್ನು ಆಕರ್ಷಿಸುತ್ತಿದ್ದೇವೆ, ಇದನ್ನು ದಿನವೊಂದಕ್ಕೆ 1,000 ರೋಗಿಗಳಿಗೆ ಹೆಚ್ಚಿಸುವ ಬೃಹತ್ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದರು.
ಯುಎಇಯಲ್ಲಿ ಪ್ರಬಲ ಆರೋಗ್ಯ ಸೇವೆ ವ್ಯವಸ್ಥೆಯನ್