ಜೊಕೊವಿಕ್ ಸೆಮಿ ಫೈನಲ್ ಗೆ
ನಲ್ಗೆ ಮಾಸನ್, ಆ.18: ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್ ಸೆಮಿ ಫೈನಲ್ಗೆ ತಲುಪಿದ್ದಾರೆ.
ಇಲ್ಲಿ ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಅವರು ಕೆನಡಾದ ಮಿಲೊಸ್ ರಾವೊನಿಕ್ ವಿರುದ್ಧ 7-5, 4-6, 6-3 ಸೆಟ್ಗಳಿಂದ ಜಯ ಸಾಧಿಸಿದರು.
ಏಳು ಬಾರಿ ಸಿನ್ಸಿನಾಟಿ ಪ್ರಶಸ್ತಿ ಜಯಿಸಿರುವ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ತಮ್ಮದೇ ದೇಶದ ಸ್ಟಾನ್ ವಾವ್ರಿಂಕರನ್ನು 6-7(2), 7-6(6), 6-2 ಸೆಟ್ಗಳಿಂದ ಸೋಲಿಸಿದ್ದಾರೆ.
ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಮರಿನ್ ಸಿಲಿಕ್ರನ್ನು ಎದುರಿಸಲಿದ್ದಾರೆ. ಸಿಲಿಕ್ ಅವರು ಪಾಬ್ಲೊ ಕರೆನೊ ಬುಸ್ಟಾರನ್ನು 7-6(7), 6-4 ಸೆಟ್ಗಳಿಂದ ಸೋಲಿಸಿದರು. ಫೆಡರರ್ ಸೆಮಿ ಫೈನಲ್ನಲ್ಲಿ ಡೇವಿಡ್ ಗಫಿನ್ರನ್ನು ಎದುರಿಸಲಿದ್ದಾರೆ. ಗಫಿನ್ ಅರ್ಜೆಂಟೀನದ ಮಾರ್ಟಿನ್ ಡೆಲ್ ಪೊಟ್ರೊರನ್ನು 7-6(5),7-6(4)ಸೆಟ್ಗಳಿಂದ ಸೋಲಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ನಲ್ಲಿ ಅಗ್ರ ರ್ಯಾಂಕಿನ ಸಿಮೊನಾ ಹಾಲೆಪ್ ಅವರು ಅಶ್ಲೆ ಬಾರ್ಟಿಯವರನ್ನು 7-5, 6-4 ಅಂತರದಿಂದಲೂ ಸೋಲಿಸಿ ಕ್ವಾರ್ಟರ್ ಫೈನಲ್ಗೆ ತಲುಪಿದರು. ಕ್ವಾ.ಫೈನಲ್ನಲ್ಲಿ ಲೆಸಿಯಾ ಸುರೆಂಕೊರನ್ನು 6-4, 6-1 ಸೆಟ್ಗಳಿಂದ ಸೋಲಿಸಿ ಸೆಮಿ ಫೈನಲ್ಗೆ ಪ್ರವೇಶಿಸಿದ್ದಾರೆ.