ಏಶ್ಯಾಗೇಮ್ಸ್: ಶೂಟರ್ ದೀಪಕ್ಕುಮಾರ್ಗೆ ಬೆಳ್ಳಿ
ಜಕಾರ್ತ(ಇಂಡೋನೇಶ್ಯಾ), ಆ.20: ಭಾರತದ ಶೂಟರ್ ದೀಪಕ್ ಕುಮಾರ್ ಏಶ್ಯನ್ ಗೇಮ್ಸ್ನ ಎರಡನೇ ದಿನವಾದ ಸೋಮವಾರ ಬೆಳ್ಳಿ ಪದಕ ಜಯಿಸಿದ್ದಾರೆ.
ದೀಪಕ್ ಪುರುಷರ 10 ಮೀ. ಏರ್ರೈಫಲ್ ಇವೆಂಟ್ನಲ್ಲಿ 247.7 ಅಂಕ ಗಳಿಸಿ 2ನೇ ಸ್ಥಾನ ಪಡೆದರು. ಭಾರತದ ಇನ್ನೋರ್ವ ಶೂಟರ್ ರವಿ ಕುಮಾರ್(205.2)ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಚೀನಾದ ಯಾಂಗ್ ಹಾರೊನ್(249.1) ಹಾಗೂ ಚೈನೀಸ್ ತೈಪೆಯ ಶಾಯೊಚುಯಾನ್(226.8)ಮೊದಲನೇ ಹಾಗೂ ಮೂರನೇ ಸ್ಥಾನ ಪಡೆದು ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದರು.
ಚೀನಾದ ಯಾಂಗ್ ಸತತ ಮೊದಲ ಸ್ಥಾನ ಪಡೆದು 2014ರ ಗೇಮ್ಸ್ನಲ್ಲಿ ಜಯಿಸಿದ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಂಡರು.
Next Story