ಟೆಸ್ಟ್ನಲ್ಲಿ ಕೊಹ್ಲಿ 23ನೇ ಶತಕ
ಟ್ರೆಂಟ್ಬ್ರಿಡ್ಜ್, ಆ.20: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ನಲ್ಲಿ ಶತಕ ದಾಖಲಿಸಿದ್ದಾರೆ.
ಟೆಸ್ಟ್ನ ಮೂರನೇ ದಿನವಾಗಿರುವ ಸೋಮವಾರ ತನ್ನ 69ನೇ ಟೆಸ್ಟ್ನಲ್ಲಿ ಕೊಹ್ಲಿ ತನ್ನ 23ನೇ ಶತಕ ಪೂರೈಸಿದರು.
191 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಕೊಹ್ಲಿ ಶತಕ ದಾಖಲಿಸಿದರು. 23 ಶತಕ ದಾಖಲಿಸಿದ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದರು.
ಮೂರನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ 113 ರನ್ಗಳ ಜೊತೆಯಾಟ ನೀಡಿ ಭಾರತಕ್ಕೆ ಭಾರೀ ಮುನ್ನಡೆ ಸಾಧಿಸಲು ನೆರವಾಗಿದ್ದಾರೆ.
ಪೂಜಾರ 72 ರನ್ ಗಳಿಸಿ ಔಟಾದರು. ಕೊಹ್ಲಿ ಮೊದಲ ಇನಿಂಗ್ಸ್ನಲ್ಲಿ 97 ರನ್ ಗಳಿಸಿ ಶತಕ ವಂಚಿತಗೊಂಡಿದ್ದರು.
Next Story