ರೋಗಿಯ ತಲೆಗೆ ಹೊಲಿಗೆ ಹಾಕಿದ ಸ್ವಚ್ಛತಾ ಸಿಬ್ಬಂದಿ !
ಗುಜರಾತ್ ಆಸ್ಪತ್ರೆಯ ದುಃಸ್ಥಿತಿ
ಭರೂಚ್, ಆ.20: ತಲೆಗೆ ಗಾಯವಾದ ವ್ಯಕ್ತಿಯೊಬ್ಬನಿಗೆ ಜಾಡಮಾಲಿಯೊಬ್ಬ ಹೊಲಿಗೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್ ನ ಭರೂಚ್ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ಆಸ್ಪತ್ರೆ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
“ತಲೆಗೆ ಗಾಯವಾದ ರೋಗಿಯೊಬ್ಬ ಆಸ್ಪತ್ರೆಗೆ ಬಂದಿದ್ದ. ಮೇಡಂ ಹೊಲಿಗೆ ಹಾಕುವಂತೆ ಹೇಳಿದರು. ಆದರೆ ನಾನು ಇದನ್ನು ವಿರೋಧಿಸಿದೆ. ಆದರೆ ಆಕೆ ನನ್ನನ್ನು ಬೆದರಿಸಿದರು. ಆದ್ದರಿಂದ ನಾನು ತಲೆಗೆ ಹೊಲಿಗೆ ಹಾಕಿದೆ” ಎಂದು ಹೊಲಿಗೆ ಹಾಕಿರುವ ಬ್ರಿಜೇಶ್ ಸೋಲಂಕಿ ಎಂಬಾತ ಹೇಳಿದ್ದಾನೆ.
Next Story