ಟರ್ಕಿಯ ಅಮೆರಿಕ ರಾಯಭಾರ ಕಚೇರಿಯತ್ತ ಗುಂಡು
ಇಸಾಂಬುಲ್, ಆ. 20: ಟರ್ಕಿ ಮತ್ತು ಅಮೆರಿಕಗಳ ನಡುವಿನ ಸಂಬಂಧ ಹಳಸುತ್ತಿರುವಂತೆಯೇ, ಸೋಮವಾರ ಟರ್ಕಿ ರಾಜಧಾನಿ ಅಂಕಾರದಲ್ಲಿರುವ ಅಮೆರಿಕ ರಾಯಭಾರ ಕಚೇರಿಯತ್ತ ವಾಹನವೊಂದರಿಂದ ಹಲವು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಆದರೆ, ಯಾರೂ ಗಾಯಗೊಂಡಿಲ್ಲ.
ಅಮೆರಿಕದ ಪಾಸ್ಟರ್ ಓರ್ವರನ್ನು ಟರ್ಕಿಯಲ್ಲಿ ವಿಚಾರಣೆಗೊಳಪಡಿಸುವ ವಿಷಯದಲ್ಲಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವುದನ್ನು ಸ್ಮರಿಸಬಹುದಾಗಿದೆ.
‘‘ಓರ್ವ ಅಜ್ಞಾತ ಬಂದೂಕುಧಾರಿ ಅಥವಾ ಬಂದೂಕುಧಾರಿಗಳು ಸ್ಥಳೀಯ ಸಮಯ ಮುಂಜಾನೆ ಸುಮಾರು 5:30ಕ್ಕೆ ಚಲಿಸುತ್ತಿದ್ದ ಬಿಳಿ ವಾಹನವೊಂದರಿಂದ 6 ಗುಂಡುಗಳನ್ನು ಹಾರಿಸಿದ್ದಾರೆ. ಅವುಗಳ ಪೈಕಿ 3 ಗುಂಡುಗಳು ಒಂದು ಕಬ್ಬಿಣದ ಬಾಗಿಲು ಮತ್ತು ಒಂದು ಕಿಟಿಕಿಗೆ ಬಡಿದಿವೆ’’ ಎಂದು ಅಂಕಾರ ಗವರ್ನರ್ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story