ಏಶ್ಯನ್ ಗೇಮ್ಸ್ : ಶೂಟಿಂಗ್ ನಲ್ಲಿ ಸೌರಭ್ ಗೆ ಚಿನ್ನ , ಅಭಿಷೇಕ್ ಗೆ ಕಂಚು
ಜಕಾರ್ತ, ಆ.21: ಏಶ್ಯನ್ ಗೇಮ್ಸ್ ನಲ್ಲಿ ಮಂಗಳವಾರ 10 ಮೀಟರ್ ಏರ್ ಪಿಸ್ತೂಲ್ ಇವೆಂಟ್ ನಲ್ಲಿ ಭಾರತದ 16ರ ಹರೆಯದ ಶೂಟರ್ ಸೌರಭ್ ಚೌಧರಿ ಚಿನ್ನ ಮತ್ತು ಅಭಿಷೇಕ್ ವರ್ಮಾ ಕಂಚು ಪಡೆದರು.
ಇದರೊಂದಿಗೆ ಏಶ್ಯನ್ ಗೇಮ್ಸ್ ನ ಮೂರನೇ ಭಾರತ ಅವಳಿ ಪದಕಗಳೊಂದಿಗೆ ಶುಭಾರಂಭ ಮಾಡಿದೆ.
ಸೌರಭ್ ಚೌಧರಿ 240.7 ಪಾಯಿಂಟ್ಸ್ ದಾಖಲಿಸಿ ಚಿನ್ನ ಮತ್ತು 219.3 ಪಾಯಿಂಟ್ಸ್ ಕಲೆ ಹಾಕಿದ ಅಭಿಷೇಕ್ ವರ್ಮಾ ಕಂಚು ಪಡೆದರು. ಜಪಾನ್ ನ ಟೊವಾಯುಕಿ ಮ್ಯಾಟ್ ಸುಡಾ (239.7) ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ಏಶ್ಯನ್ ಗೇಮ್ಸ್ ನಲ್ಲಿ ಭಾರತ ಪಡೆದಿರುವ ಪದಕಗಳ ಸಂಕ್ಯೆ 3ಕ್ಕೆ ಏರಿದೆ. ಈ ಮೊದಲು ಮಹಿಳೆಯರ 50 ಕೆ.ಜಿ. ಕುಸ್ತಿ ಫ್ರೀಸ್ಟೈಲ್ ನಲ್ಲಿ ವಿನೇಶ್ ಫೋಗಟ್ ಮತ್ತು ಪುರುಷರ 65 ಕೆ.ಜಿ.ಕುಸ್ತಿಯ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಬಾಚಿಕೊಂಡಿದ್ದರು.
Next Story