varthabharthi

ಈ ದಿನ

​ನಯಾಗರ ಜಲಪಾತದಿಂದ ವಿದ್ಯುತ್ ಉತ್ಪಾದನೆ ಆರಂಭ

ವಾರ್ತಾ ಭಾರತಿ : 26 Aug, 2018

1303: ಖಿಲ್ಜಿ ವಂಶದ ಪ್ರಖ್ಯಾತ ಸುಲ್ತಾನ ಅಲ್ಲಾವುದ್ದೀನ್ ಖಲ್ಜಿ ಐತಿಹಾಸಿಕ ಕದನದಲ್ಲಿ ಚಿತ್ತೋರ್‌ಗಡ್ ಸಂಸ್ಥಾನದ ಮೇಲೆ ವಿಜಯ ಸಾಧಿಸಿದನು. 1843: ಟೈಪ್‌ರೈಟರ್ ಕಂಡುಹಿಡಿದ ಅಮೆರಿಕದ ಚಾರ್ಲ್ಸ್ ಥರ್ಬರ್‌ಗೆ ಹಕ್ಕುಸ್ವಾಮ್ಯ ನೀಡಲಾಯಿತು.

1858: ಟೆಲಿಗ್ರಾಫ್‌ನಿಂದ ವಿಶ್ವದಲ್ಲಿ ಮೊದಲ ಬಾರಿಗೆ ಸುದ್ದಿಯನ್ನು ಕಳುಹಿಸಲಾಯಿತು.

1895: ಅಮೆರಿಕದ ವಿಶ್ವಪ್ರಸಿದ್ಧ ನಯಾಗರ ಜಲಪಾತದಿಂದ ಮೊದಲ ಬಾರಿಗೆ ವಿದ್ಯುತ್‌ನ್ನು ಉತ್ಪಾದಿಸಲಾಯಿತು.

1939: ಕ್ರೋವೆಷ್ಯಾ ಈ ದಿನ ಸ್ವಾಯತ್ತ ದೇಶದ ಸ್ಥಾನಮಾನ ಪಡೆಯಿತು.

1972: 20ನೇ ಒಲಿಂಪಿಕ್ಸ್ ಕ್ರೀಡೆಗಳು ಜರ್ಮನ್ ದೇಶದ ಮ್ಯೂನಿಚ್ ನಗರದಲ್ಲಿ ಈ ದಿನ ಆರಂಭಗೊಂಡವು.

1982: ನಾಸಾದಿಂದ ಟೆಲಿಸ್ಯಾಟ್-ಎಫ್ ಉಪಗ್ರಹ ಉಡಾವಣೆ ಮಾಡಲಾಯಿತು.

1983: ಭೀಕರ ಜಲಪ್ರವಾಹಕ್ಕೆ ಸ್ಪೇನ್‌ನ ಹಳೆಯ ನಗರ ಬಿಲ್ಬಾವೊ ಬಹುತೇಕ ನಾಶವಾಯಿತು.

1989: ಬಂಗಾಳದ ಸುಮಿತ್ರಾ ಲಾಹಾ ಎಂಬವರು 7ನೇ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 227.5 ಕೆ.ಜಿ. ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು.

2002: ಅಂತರ್‌ರಾಷ್ಟ್ರೀಯ ಭೂ ಶೃಂಗಸಭೆ-2002 ದ.ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಆರಂಭವಾಯಿತು.

2012: ಚೀನಾದ ಯಾನಾನ್ ಪ್ರಾಂತದಲ್ಲಿ ಸಂಭವಿಸಿದ ಬಸ್ ದುರಂತವೊಂದರಲ್ಲಿ 36 ಜನ ಸಾವನ್ನಪ್ಪಿದ ವರದಿಯಾಗಿದೆ.

2017: ಡೇರಾ ಸಚ್ಚಾ ಸೌಧಾದ ಮುಖ್ಯಸ್ಥ ಗುರ್ಮಿತ್ ರಾಮ್‌ರಹೀಮ್‌ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾದ ನಂತರ ನಡೆದ ಹಿಂಸೆಗೆ ಹರ್ಯಾಣಾದ ಪಂಚಕುಲಾದಲ್ಲಿ 31 ಜನ ಸಾವನ್ನಪ್ಪಿ, 120 ಜನ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

2017: ಸ್ಪೇನ್‌ನ ಬಾರ್ಸಿಲೋನಾದಲ್ಲಿ ಭಯೋತ್ಪಾದಕ ದಾಳಿಯನ್ನು ಖಂಡಿಸಿ 5ಲಕ್ಷಕ್ಕಿಂತ ಹೆಚ್ಚು ಜನರು ಇಂದು ಶಾಂತಿ ಮೆರವಣಿಗೆ ನಡೆಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)