ಬಹುನಿರೀಕ್ಷಿತ ‘ಥಗ್ಸ್ ಆಫ್ ಹಿಂದುಸ್ತಾನ್’ ಚಿತ್ರದಲ್ಲಿ ಅಮಿತಾಬ್ ರ ‘ಖುದಾಬಕ್ಷ್’ ಫಸ್ಟ್ ಲುಕ್ ಬಿಡುಗಡೆ
ಬಹುತಾರಾಗಣದ ಬಾಲಿವುಡ್ ಚಿತ್ರ ‘ಥಗ್ಸ್ ಆಫ್ ಹಿಂದುಸ್ತಾನ್’ನ ಅಮಿತಾಬ್ ಬಚ್ಚನ್ ಅವರ ಫಸ್ಟ್ ಲುಕ್ ಅನ್ನು ಇಂದು ಆಮಿರ್ ಖಾನ್ ಬಿಡುಗಡೆಗೊಳಿಸಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಖುದಾಬಕ್ಷ್ ಪಾತ್ರವನ್ನು ನಿರ್ವಹಿಸಲಿದ್ದಾರೆ.
“ಎಲ್ಲರ ಪಾಲಿನ ಬಹುದೊಡ್ಡ ಥಗ್” ಎಂದು ಟ್ವೀಟ್ ಮಾಡಿರುವ ಆಮಿರ್ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದಾರೆ. ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರವು ಫಿಲಿಪ್ ಮೀಡೋಸ್ ರ ‘ಕನ್ಫೆಶನ್ಸ್ ಆಫ್ ಎ ಥಗ್ ಆ್ಯಂಡ್ ಕಲ್ಟ್ ಆಫ್ ದ ಥಗ್ಗೀ’ ಎಂಬ ಕಾದಂಬರಿಯನ್ನು ಆಧರಿಸಿದೆ.
ದೀಪಾವಳಿ ಸಂದರ್ಭ ಈ ಚಿತ್ರ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ. ಆಮಿರ್ ಖಾನ್ ಅವರು ಈ ಚಿತ್ರದಲ್ಲಿ ಅಮೀರ್ ಅಲಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Next Story