ಇಸ್ರೇಲ್ ವಾಯುದಾಳಿಯಲ್ಲಿ ಇಬ್ಬರು ಫೆಲೆಸ್ತೀನಿಯರು ಮೃತ್ಯು
ಗಾಝಾ ಸಿಟಿ, ಸೆ. 18: ಇಸ್ರೇಲ್ ಜೊತೆಗಿನ ಗಡಿ ಬೇಲಿ ಸಮೀಪ ಸೋಮವಾರ ರಾತ್ರಿ ಇಸ್ರೇಲ್ ನಡೆಸಿದ ವಾಯು ದಾಳಿ ಬಳಿಕ, ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಗಾಝಾ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಗಡಿಬೇಲಿ ಸಮೀಪಕ್ಕೆ ಬಂದು ಸಂಶಯಾಸ್ಪದ ವಸ್ತುವೊಂದನ್ನು ಇಟ್ಟ ಫೆಲೆಸ್ತೀನಿಯರನ್ನು ಗುರಿಯಾಗಿಸಿ ವಾಯು ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ.
ಗಾಝಾದ ಮೇಲೆ ಇಸ್ರೇಲ್ ಮತ್ತು ಈಜಿಪ್ಟ್ ವಿಧಿಸಿರುವ ದಿಗ್ಬಂಧನದ ವಿರುದ್ಧ ಹಮಾಸ್ ಸಂಘಟನೆಯ ನೇತೃತ್ವದಲ್ಲಿ ಇಸ್ರೇಲ್ ಗಡಿಯಲ್ಲಿ ಫೆಲೆಸ್ತೀನಿಯರು ವಾರಕ್ಕೊಮ್ಮೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಸೋಮವಾರ, ಇಸ್ರೇಲನ್ನು ಬೇರ್ಪಡಿಸುವ ಗಡಿಬೇಲಿ ಸಮೀಪದ ಗಾಝಾದ ಮೆಡಿಟರೇನಿಯನ್ ಬೀಚ್ನಲ್ಲಿ ಸಾವಿರಾರು ಫೆಲೆಸ್ತೀನಿಯರು ನೆರೆದಿದ್ದರು.
ಇಸ್ರೇಲ್ ಸೈನಿಕರು ನಡೆಸಿದ ಗೋಲಿಬಾರ್ನಲ್ಲಿ 26 ಪ್ರತಿಭಟನಕಾರರು ಗಾಯಗೊಂಡಿದ್ದಾರೆ.
Next Story