varthabharthi

ನಿಧನ

ಕಾಪು ದಯಾನಂದ ಶೆಟ್ಟಿ

ವಾರ್ತಾ ಭಾರತಿ : 21 Sep, 2018

ಉಡುಪಿ, ಸೆ.21: ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮೆನೇಜರ್ ಕಾಪು ದಯಾನಂದ ಶೆಟ್ಟಿ (80) ಬುಧವಾರ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅಮೇರಿಕಾದಲ್ಲಿ ನೆಲೆಸಿರುವ ಸಹೋದರ ಡಾ.ಕಾಪು ಚಂದ್ರಶೇಖರ ಶೆಟ್ಟಿ ಸ್ಥಾಪಿಸಿದ ಕಾಪು ವಿನೋದಾ ಚಂದ್ರಶೇಖರ ಶೆಟ್ಟಿ ಟ್ರಸ್ಟ್‌ನ ವಿಶ್ವಸ್ಥರಾಗಿದ್ದ ದಯಾನಂದ ಶೆಟ್ಟಿ ಶಿಕ್ಷಣಪ್ರೇಮಿಯಾಗಿದ್ದು, ಶಿರ್ವ ಪರಿಸರದ ನೂರಾರು ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿ ಕಲಿಕೆಗೆ ನೆರವಾಗಿದ್ದರು. ಅದೇ ರೀತಿ ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ಗೂ ಕಳೆದೊಂದು ದಶಕದಿಂದ ದೊಡ್ಡ ಮೊತ್ತದ ಧನ ಸಹಾಯ ನೀಡಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದಾರೆ.

ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)