ಏಷ್ಯಾ ಫೆಸಿಪಿಕ್ ಮಾಸ್ಟರ್ಸ್ ಗೇಮ್ಸ್: ಸಾಧಕರಿಗೆ ಅಗರ್ವಾಲ್ ಆಸ್ಪತ್ರೆ ಅಭಿನಂದನೆ
ಬೆಂಗಳೂರು, ಸೆ. 21: ಪೆನಾಂಗ್ನಲ್ಲಿ ನಡೆದ ಏಷ್ಯಾ ಫೆಸಿಪಿಕ್ ಮಾಸ್ಟರ್ಸ್ ಗೇಮ್ಸ್ನಲ್ಲಿ 14 ಪದಕ ಪಡೆದಿರುವ ಈಜುಗಾರರಿಗೆ ಅಗರ್ವಾಲ್ ಆಸ್ಪತ್ರೆ ಅಭಿನಂದಿಸಿದೆ.
ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಈಜು ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಎಂ.ಆರ್.ಗೋಪಾಲ್ ಹೊಸೂರ್ ಮಾತನಾಡಿ, ಭವಿಷ್ಯದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವ ಈಜುಗಾರರಿಗೆ ಉತ್ತಮ ಪ್ರದರ್ಶನ ನೀಡಲು ಪದಕ ಪಡೆದವರು ಸ್ಫೂರ್ತಿಯಾಗಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರಕಾರ ಹಾಗೂ ಬಿಬಿಎಂಪಿ ಸ್ವೀಮಿಂಗ್ಪೂಲ್ ಕಾಯ್ದೆಯನ್ನು ಜಾರಿಗೆ ತರಬೇಕು. ಬಹುತೇಕ ಖಾಸಗಿ ಈಜು ಕೊಳಗಳು ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈಜುಕೊಳಗಳು ಸಾರ್ವಜನಿಕರಿಗೆ ಮುಕ್ತವಾಗಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು.
Next Story