ದೋಣಿ ಮುಳುಗಿ 100 ಸಾವು
ನೈರೋಬಿ (ಕೆನ್ಯ), ಸೆ. 21: ತಾಂಝಾನಿಯ ದೇಶದ ವಿಕ್ಟೋರಿಯ ಸರೋವರದಲ್ಲಿ ಗುರುವಾರ ದೋಣಿಯೊಂದು ಮುಳುಗಿದ್ದು, ಮೃತಪಟ್ಟವರ ಸಂಖ್ಯೆ ಶುಕ್ರವಾರ 100ನ್ನು ದಾಟಿದೆ.
ತಾಂಝಾನಿಯ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ದೋಣಿಯು ಸುಮಾರು 200 ಪ್ರಯಾಣಿಕರನ್ನು ಒಯ್ಯುತ್ತಿದ್ದು ಎನ್ನಲಾಗಿದೆ. ಅದು ದೋಣಿಯ ಸಾಮರ್ಥ್ಯದ ದುಪ್ಪಟ್ಟಾಗಿದೆ.
ದೋಣಿಯು ಗುರುವಾರ ಉಕರ ದ್ವೀಪದ ಪಿಯರ್ಗೆ ಸಮೀಪ ಮಗುಚಿತು ಎಂದು ಸರಕಾರಿ ಮಾಧ್ಯಮದಲ್ಲಿ ಬಂದಿರುವ ವರದಿಗಳು ಹೇಳಿವೆ.
ದೋಣಿಯು ನಿಲ್ದಾಣಕ್ಕೆ ಬಂದಾಗ ಇಳಿಯುವುದಕ್ಕಾಗಿ ಪ್ರಯಾಣಿಕರು ಒಂದು ಬದಿಗೆ ಧಾವಿಸಿದಾಗ ಮಗುಚಿತು ಎನ್ನಲಾಗಿದೆ.
Next Story