ಭಾರತಕ್ಕೆ ಹ್ಯಾಟ್ರಿಕ್ ಗೆಲುವು
►ಬಾಂಗ್ಲಾ ವಿರುದ್ಧ 7 ವಿಕೆಟ್ಗಳ ಜಯ ►ರೋಹಿತ್ ಔಟಾಗದೆ 83 ರನ್
ದುಬೈ, ಸೆ.21: ಏಶ್ಯಕಪ್ ಕ್ರಿಕೆಟ್ ಟೂರ್ನಮೆಂಟ್ನ ಸೂಪರ್ -4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 7 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ಇಲ್ಲಿನ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 174 ರನ್ಗಳ ಸವಾಲನ್ನು ಪಡೆದ ಭಾರತ ಇನ್ನೂ 82 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಗಳಿಸಿದೆ.
ನಾಯಕ ರೋಹಿತ್ ಶರ್ಮ ಔಟಾಗದೆ 83 ರನ್(104ಎ, 5ಬೌ,3ಸಿ ) , ಆರಂಭಿಕ ದಾಂಡಿಗ ಶಿಖರ್ ಧವನ್ 40 ರನ್ , ಮಹೇಂದ್ರ ಸಿಂಗ್ ಧೋನಿ 33ರನ್ (37ಎ, 3ಬೌ) , ಅಂಬಟಿ ರಾಯುಡು 13 ರನ್ , ದಿನೇಶ್ ಕಾರ್ತಿಕ್ ಔಟಾಗದೆ 1 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
,,,,,,,,,,
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬಾಂಗ್ಲಾ ತಂಡ 49.1 ಓವರ್ಗಳಲ್ಲಿ 173 ರನ್ಗಳಿಗೆ ಆಲೌಟಾಗಿತ್ತು.
Next Story