ಪಾನ್ ಪೆಸಿಫಿಕ್ ಓಪನ್: ಒಸಾಕಾ ಸೆಮಿ ಫೈನಲ್ಗೆ
ಟೋಕಿಯೊ, ಸೆ.21: ಯು.ಎಸ್. ಓಪನ್ ಚಾಂಪಿಯನ್ ನವೋಮಿ ಒಸಾಕಾ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ಪ್ರವೇಶಿಸಿದ್ದಾರೆ.
ಈ ತಿಂಗಳಾರಂಭದಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಯುಎಸ್ ಓಪನ್ ಫೈನಲ್ನಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ರನ್ನು ಮಣಿಸಿದ ಒಸಾಕಾ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಬಾರ್ಬೊರಾ ಸ್ಟ್ರೈಕೋವಾರನ್ನು 6-3, 6-4 ನೇರ ಸೆಟ್ಗಳಿಂದ ಸೋಲಿಸಿದರು.
ಸತತ 9ನೇ ಪಂದ್ಯದಲ್ಲಿ ಜಯ ಸಾಧಿಸಿರುವ ಒಸಾಕಾ ಮುಂದಿನ ಸುತ್ತಿನಲ್ಲಿ ಕಮಿಲಾ ಗಿಯೊರ್ಗಿ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ ವಿಕ್ಟೋರಿಯ ಅಝರೆಂಕಾ ಗಾಯದ ಸಮಸ್ಯೆಯಿಂದ ಪಂದ್ಯದಿಂದ ಹಿಂದೆ ಸರಿದ ಕಾರಣ ಗಿಯೊರ್ಗಿ ಮುಂದಿನ ಸುತ್ತಿಗೇರಿದ್ದಾರೆ.
Next Story