ಗೋವಾ: ವಿಧಾನ ಸಭೆ ಸ್ಪೀಕರ್ ವಜಾ ಮಾಡಲು ಕಾಂಗ್ರೆಸ್ ನೋಟಿಸ್
ಪಣಜಿ, ಸೆ. 22: ಗೋವಾ ವಿಧಾನ ಸಭೆ ಸ್ಪೀಕರ್ ಪ್ರಮೋದ್ ಸಾವಂತ್ ಅವರನ್ನು ವಜಾಗೊಳಿಸಲು ಗೋವಾ ಕಾಂಗ್ರೆಸ್ ಶುಕ್ರವಾರ ನೋಟಿಸು ಜಾರಿ ಮಾಡಿದೆ. ಸಾವಂತ್ ಅವರನ್ನು ಸ್ಥಾನದಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಸಲು ಸದನದಲ್ಲಿ ಅಧಿವೇಶನ ಆಯೋಜಿಸುವಂತೆ ಕಾಂಗ್ರೆಸ್ 14 ದಿನ ಮುಂಚಿತವಾಗಿ ನೋಟಿಸು ಜಾರಿ ಮಾಡಿದೆ.
ವಿಧಾನ ಸಭೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಡ ಮೈತ್ರಿ ಪಕ್ಷ ಬಹುಮತ ಕಳೆದಕೊಂಡಿದೆ ಎಂದು ಪ್ರತಿಪಾದಿಸಿ ಪರ್ಯಾಯ ಸರಕಾರ ರೂಪಿಸಲು ಅವಕಾಶ ನೀಡುವಂತೆ ಕೋರಿದ ದಿನದ ಬಳಿಕ ಕಾಂಗ್ರೆಸ್ ಈ ನೋಟಿಸು ಜಾರಿ ಮಾಡಿದೆ. ಗೋವಾ ಸರಕಾರದ ಮುಖ್ಯಮಂತ್ರಿಯಾಗಿರುವ ಮನೋಹರ್ ಪಾರಿಕ್ಕಾರ್ ಪೇಂಕ್ರಿಯಾಸ್ ಕಾಯಿಲೆಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಪೀಕರ್ ಅವರ ವಾಗ್ದಂಡನೆ ಕುರಿತು ಚರ್ಚೆ ನಡೆಸಲು ಸದನದ ಅನುಮತಿ ಕೋರುವ ನಿಲುವಳಿಯನ್ನು ಸಲ್ಲಿಸಲು ರಾಜ್ಯದ 243 ನಿಯಮ ಅವಕಾಶ ನೀಡುತ್ತದೆ.
Next Story