ಏಶ್ಯನ್ ಟೀಮ್ ಸ್ನೂಕರ್: ಚಾಂಪಿಯನ್ಶಿಪ್: ಭಾರತಕ್ಕೆ ಬೆಳ್ಳಿ
ದೋಹಾ, ಸೆ.22: ಏಶ್ಯನ್ ಟೀಮ್ ಸ್ನೂಕರ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ 2-3 ಅಂತರದಿಂದ ಸೋತಿರುವ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಪಂಕಜ್ ಅಡ್ವಾಣಿ ಮೊದಲ ಫ್ರೇಮ್ನಲ್ಲಿ ಬಾಬರ್ ಮಸಿಹ್ ವಿರುದ್ಧ 2-110(81)ರಿಂದ ಸೋಲುಂಡರು. ಮಲ್ಕೀಟ್ ಸಿಂಗ್ ಪಾಕ್ನ ಮುಹಮ್ಮದ್ ಆಸಿಫ್ ವಿರುದ್ಧ 81(52)-42 ರಿಂದ ಜಯ ಸಾಧಿಸಿದರು.
ಡಬಲ್ಸ್ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು 70-72 ಅಂತರದಿಂದ ಸೋಲಿಸಿತು. ಪಂಕಜ್ ಅಡ್ವಾಣಿ ತನ್ನ 2ನೇ ಫ್ರೇಮ್ನಲ್ಲಿ ಮುಹಮ್ಮದ್ ಆಸಿಫ್ ವಿರುದ್ಧ 107(68)-5 ರಿಂದ ಜಯ ಸಾಧಿಸಿದರು. ಆದರೆ, ಮಲ್ಕೀಟ್ ಸಿಂಗ್ ಅವರು ಬಾಬರ್ ವಿರುದ್ಧ 18-98 ರಿಂದ ಸೋಲುಂಡರು.
Next Story