ಕಿಕಿ ಬೆರ್ಟೆನ್ಸ್ ಚಾಂಪಿಯನ್
ಕೊರಿಯಾ ಓಪನ್
ಸಿಯೋಲ್, ಸೆ.23:ಕೊರಿಯಾ ಓಪನ್ ಮಹಿಳೆಯರ ಸಿಂಗಲ್ಸ್ ಟೆನಿಸ್ ಟೂರ್ನಮೆಂಟ್ನಲ್ಲಿ ಪೊಲೆಂಡ್ನ ಕಿಕಿ ಬೆರ್ಟೆನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ರವಿವಾರ ನಡೆದ ಫೈನಲ್ನಲ್ಲಿ ಕಿಕಿ ಅವರು ಆಸ್ಟ್ರೇಲಿಯದ ಅಜ್ಲಾ ಟೊಮ್ಲ್ ಜಾನೊವಿಕ್ ವಿರುದ್ಧ 7-6(2), 4-6, 6-2 ಅಂತರದಿಂದ ಜಯ ಗಳಿಸಿ ಮೂರನೇ ಡಬ್ಲುಟಿಎ ಟೂರ್ ಸಿಂಗಲ್ಸ್ ಪ್ರಶಸ್ತಿಯನ್ನು ಬಾಚಿಕೊಂಡರು. ಎರಡನೇ ಶ್ರೇಯಾಂಕದ ಬೆರ್ಟೆನ್ಸ್ ಅವರು ಎದುರಾಳಿ ಅಜ್ಲಾಗೆ ಮೊದಲ ಗೆಲುವು ನಿರಾಕರಿಸಿದರು.
Next Story