ತನ್ನನ್ನು ಬುಕ್ಕಿಗಳು ಸಂಪರ್ಕಿಸಿದ್ದರು: ಅಫ್ಘಾನ್ ಆಟಗಾರ ಶಾಝಾದ್
ದುಬೈ, ಸೆ.24: ಶಾರ್ಜಾದಲ್ಲಿ ಅಕ್ಟೋಬರ್ 5ರಿಂದ 23ರ ತನಕ ನಡೆಯುವ ಮುಂಬರುವ ಅಫ್ಘಾನ್ ಪ್ರೀಮಿಯರ್ ಟ್ವೆಂಟಿ-20 ಲೀಗ್ ವೇಳೆ ಸ್ಪಾಟ್ ಫಿಕ್ಸಿಂಗ್ ನಡೆಸುವಂತೆ ಬುಕ್ಕಿಯೊಬ್ಬ ತನ್ನನ್ನು ಸಂಪರ್ಕಿಸಿದ್ದಾನೆ ಎಂದು ಅಫ್ಘಾನಿಸ್ತಾನದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಮುಹಮ್ಮದ್ ಶಾಝಾದ್ ಬಹಿರಂಗಪಡಿಸಿದ್ದಾರೆ.
ಶಾಝಾದ್ ಪ್ರಸ್ತುತ ಏಶ್ಯಕಪ್ನಲ್ಲಿ ಭಾಗವಹಿಸಲು ಯುಎಇನಲ್ಲಿದ್ದಾರೆ. ತನ್ನನ್ನು ಬುಕ್ಕಿಯೊಬ್ಬ ಸಂಪರ್ಕಿಸಿದ ಕುರಿತು ಟೀಮ್ ಮ್ಯಾನೇಜ್ಮೆಂಟ್ಗೆ ಶಾಝಾದ್ ಮಾಹಿತಿ ನೀಡಿದ್ದಾರೆ. ಅಫ್ಘಾನ್ ಕ್ರಿಕೆಟ್ ಮಂಡಳಿ ಐಸಿಸಿ ಭ್ರಷ್ಟಾಚಾರ ತಡೆ ಘಟಕಕ್ಕೆ ಈ ವಿಚಾರವನ್ನು ತಿಳಿಸಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ಸೋಮವಾರ ವರದಿ ಮಾಡಿದೆ.
ಶಾಝಾದ್ ಅಫ್ಘಾನಿಸ್ತಾನ ತಂಡದ ಪ್ರಮುಖ ಆಟಗಾರನಾಗಿದ್ದು ತನ್ನ ತಂಡದ ಪರ 75 ಏಕದಿನ ಹಾಗೂ 65 ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಜೂನ್ನಲ್ಲಿ ಭಾರತದಲ್ಲಿ ನಡೆದ ಅಫ್ಘಾನ್ ತಂಡದ ಆಡಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲೂ ಶಾಝಾದ್ ಆಡಿದ್ದಾರೆ.
Next Story