ದುಬೈ: ಬುಧವಾರ 123 ಕೋಟಿ ರೂ. ಮೌಲ್ಯದ ಶೂ ಅನಾವರಣ
ದುಬೈ, ಸೆ. 25: ಜಗತ್ತಿನ ಅತ್ಯಂತ ದುಬಾರಿ ಶೂಗಳನ್ನು ಯುಎಇಯಲ್ಲಿ ಬುಧವಾರ ಅನಾವರಣಗೊಳಿಸಲಾಗುವುದು. ಇದರ ಮೌಲ್ಯ 123 ಕೋಟಿ ರೂಪಾಯಿ ಎಂದು ‘ಖಲೀಜ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ.
ಈ ವಿಲಾಸಿ ಪಾದರಕ್ಷೆಗಳ ಜೊತೆಯನ್ನು ವಜ್ರಗಳು ಮತ್ತು ಚಿನ್ನದಿಂದ ತಯಾರಿಸಲಾಗಿದೆ ಹಾಗೂ ಅವುಗಳನ್ನು ವಿನ್ಯಾಸಗೊಳಿಸಿ ನಿರ್ಮಿಸಲು 9 ತಿಂಗಳು ತಗಲಿದೆ.
‘ಪ್ಯಾಶನ್ ಡೈಮಂಡ್ ಶೂಸ್’ನಲ್ಲಿ ನೂರಾರು ವಜ್ರಗಳಿವೆ. ಜೊತೆಗೆ ತಲಾ 15 ಕ್ಯಾರಟ್ಗಳ ಎರಡು ‘ಡಿ-ಫ್ಲಾಲೆಸ್’ ವಜ್ರಗಳನ್ನು ಅಳವಡಿಸಲಾಗಿದೆ. ಇದನ್ನು ಜಗತ್ತಿನ ಏಕೈಕ 7-ಸ್ಟಾರ್ ಹೊಟೇಲ್ ದುಬೈನ ‘ಬುರ್ಜ್ ಅಲ್ ಅರಬ್’ನಲ್ಲಿ ಬುಧವಾರ ಪ್ರದರ್ಶಿಸಲಾಗುವುದು.
Next Story