varthabharthi

ಬೆಂಗಳೂರು

ಡಿ.8ರಂದು ‘ಶಿಕ್ಷಣ ವೃತ್ತಿಪರರ ಒಲಿಂಪಿಯಾಡ್’

ವಾರ್ತಾ ಭಾರತಿ : 27 Sep, 2018

ಬೆಂಗಳೂರು, ಸೆ.27: ಕನ್ನಡ ಮಾಧ್ಯಮದ ಶಿಕ್ಷಕರನ್ನು ಕೌಶಲ್ಯರನ್ನಾಗಿ ಮಾಡಲು ಇದೇ ಮೊದಲ ಬಾರಿಗೆ ಸೆಂಟಾ ಸಂಸ್ಥೆಯು ಡಿ.8ರಂದು ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ ಶಿಕ್ಷಕರ ರಾಷ್ಟ್ರೀಯ ಸ್ಪರ್ಧೆ ‘ಶಿಕ್ಷಣ ವೃತ್ತಿಪರರ ಒಲಿಂಪಿಯಾಡ್’ ಏರ್ಪಡಿಸಿರುವುದಾಗಿ ತಿಳಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ರಮ್ಯಾ ಮಾತನಾಡಿ, ರಾಜ್ಯದ ಖಾಸಗಿ ಶಾಲೆಗಳಲ್ಲಿ ಈಗಾಗಲೇ ಬಹಳಷ್ಟು ಶಿಕ್ಷಕರು ಭಾಗವಹಿಸಿದ್ದು, ಸರಕಾರಿ ಶಾಲೆಗಳ ಶಿಕ್ಷಕರು ಭಾಗವಹಿಸುವುದನ್ನು ಪ್ರೋತ್ಸಾಹಿಸಲು ಕನ್ನಡ ಮಾಧ್ಯಮವನ್ನು ಇದೇ ಮೊದಲ ಬಾರಿಗೆ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಸೇರಿಸಿದ್ದೇವೆ ಎಂದು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)