varthabharthi

ಬೆಂಗಳೂರು

ದಸರಾ: ಅಕ್ಟೋಬರ್ 18ರಿಂದ 4 ದಿನ ಸರಣಿ ರಜೆ ಸಾಧ್ಯತೆ?

ವಾರ್ತಾ ಭಾರತಿ : 9 Oct, 2018

ಬೆಂಗಳೂರು, ಅ.9: ಬ್ಯಾಂಕಿಗೆ ಸಂಬಂಧಿಸಿದ ಹಾಗೂ ಸರಕಾರಿ ಕಚೇರಿಗೆ ಸಂಬಂಧಿತ ತುರ್ತು ಕೆಲಸಗಳಿದ್ದಲ್ಲಿ ಅಕ್ಟೋಬರ್ 17ರೊಳಗೆ ಮುಗಿಸಿಬಿಡುವುದು ಉತ್ತಮ. ಏಕೆಂದರೆ ದಸರಾ ಪ್ರಯುಕ್ತ ಅಕ್ಟೋಬರ್ 18ರಿಂದ 21ರವರೆಗೆ 4 ದಿನಗಳ ಸರಣಿ ಸಾರ್ವತ್ರಿಕ ರಜೆ ಘೋಷಣೆಯಾಗುವ ಸಾಧ್ಯತೆ ಇದೆ.

ಆಯುಧ ಪೂಜೆ ಮತ್ತು ವಿಜಯದಶಮಿ ಅಂಗವಾಗಿ ಅ.18 ಮತ್ತು 19ರಂದು ಸಾರ್ವತ್ರಿಕ ರಜೆ ಇದೆ. ಈ ನಡುವೆ ಅ.21 ರವಿವಾರವಾಗಿರುವುದರಿಂದ ಸರಕಾರಿ ನೌಕರರು ಅ.20ರ ಶನಿವಾರದಂದು ಸಾಂದರ್ಭಿಕ ರಜೆಯನ್ನು ಬಳಸಿ ರಜೆ ಮಾಡುವ ಸಾಧ್ಯತೆ ಇದೆ. ಇದು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಡಕುಂಟು ಮಾಡಬಹುದು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅ.20ರಂದು ಸಾರ್ವತ್ರಿಕ ರಜೆ ಘೋಷಿಸುವ ಪ್ರಸ್ತಾವ ಮಾಡಿದೆ. ಇದಕ್ಕಾಗಿ ಅಕ್ಟೋಬರ್ ತಿಂಗಳ ಎರಡನೇ ಶನಿವಾರವಾದ ಅ.13ರ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿ ಅಂದು ಕರ್ತವ್ಯ ದಿನವನ್ನಾಗಿಸುವ ಹಾಗೂ ಅ.20ನ್ನು ಸಾರ್ವತ್ರಿಕ ರಜೆ ಎಂದು ಮಾರ್ಪಾಡು ಮಾಡುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರಸ್ತಾವ ಮುಖ್ಯಮಂತ್ರಿಯ ಮುಂದಿದ್ದು, ಅವರು ಒಪ್ಪಿಗೆ ನೀಡಿದರೆ ಅ.18ರಿಂದ 21ರವರೆಗೆ 4 ದಿನಗಳ ಸಾರ್ವತ್ರಿಕ ಸರಣಿ ರಜೆ ಇರಲಿದೆ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಗಮನಹರಿಸುವುದು ಉತ್ತಮ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)