varthabharthi

ಅಂತಾರಾಷ್ಟ್ರೀಯ

ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ರಾಜೀನಾಮೆ: ವರದಿ

ವಾರ್ತಾ ಭಾರತಿ : 9 Oct, 2018

ನ್ಯೂಯಾರ್ಕ್,ಅ.9: ಅಮೆರಿಕ ರಾಯಭಾರಿ ಸ್ಥಾನಕ್ಕೆ ನಿಕ್ಕಿ ಹ್ಯಾಲೆ ರಾಜೀನಾಮೆ ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿರುವುದಾಗಿ ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.

ಶ್ವೇತಭವನದಲ್ಲಿ ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾಗಿದ್ದ ಸಂದರ್ಭ ನಿಕ್ಕಿ ರಾಜೀನಾಮೆಯ ಬಗ್ಗೆ ಚರ್ಚಿಸಿದ್ದರು. ಟ್ರಂಪ್ ಅವರು ನಿಕ್ಕಿಯವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ ಎಂದು ಆ್ಯಕ್ಸಿಯೋಸ್ ನ್ಯೂಸ್ ಸೈಟ್ ವರದಿ ತಿಳಿಸಿದೆ.

ಈ ಬೆಳವಣಿಗೆಗಳ ನಡುವೆ, “ನನ್ನ ಸ್ನೇಹಿತೆ ರಾಯಭಾರಿ ನಿಕ್ಕಿ ಹ್ಯಾಲೆ ಜೊತೆ ಓವಲ್ ಕಚೇರಿಯಲ್ಲಿ ದೊಡ್ಡ ಘೋಷಣೆಯೊಂದನ್ನು ಮಾಡಲಿದ್ದೇನೆ” ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)