varthabharthi

ಕ್ರೀಡೆ

ಯೂತ್ ಒಲಿಂಪಿಕ್ಸ್: ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಭಾರತದ ಮನು ಭಾಕರ್

ವಾರ್ತಾ ಭಾರತಿ : 9 Oct, 2018

ಬ್ಯುನಸ್ ಐರಿಸ್, ಅ.9: ಇಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್ ನಲ್ಲಿ ಭಾರತದ ಮನು ಭಾಕರ್ ಭಾರತಕ್ಕೆ 2ನೆ ಚಿನ್ನ ಗೆದ್ದುಕೊಟ್ಟಿದ್ದಾರೆ. ಮಿಝೋರಾಂನ ಜೆರ್ಮಿ ಲಾಲ್ ರಿನ್ನುಂಗಾ 60 ಕೆಜಿ ವೇಟ್ ಲಿಫ್ಟಿಂಗ್ ನಲ್ಲಿ ಚೊಚ್ಚಲ ಚಿನ್ನ ಗೆದ್ದಿದ್ದರು.

ಮನುಭಾಕರ್ ಯೂತ್ ಒಲಿಂಪಿಕ್ಸ್‌ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಪಡೆಯುವ ಮೂಲಕ ಈ ಸಾಧನೆ ಮಾಡಿರುವ ಭಾರತದ ಮೊದಲ ವನಿತೆ ಎನಿಸಿಕೊಂಡಿದ್ದಾರೆ.

 16ರ ಹರೆಯದ ಮನು ಮಂಗಳವಾರ ನಡೆದ ಫೈನಲ್‌ನಲ್ಲಿ 236.5 ಪಾಯಿಂಟ್ಸ್ ದಾಖಲಿಸಿ ಚಿನ್ನಕ್ಕೆ ಮುತ್ತಿಟ್ಟರು. ರಶ್ಯದ ಇಯಾನಾ ಎನಿನಾ (235.9) ಬೆಳ್ಳಿ ಮತ್ತು ನಿನೊ ಖುಟ್ಸಿಬೆರಿಜ್ಝೆ ಕಂಚು ಪಡೆದರು. ಭಾರತಕ್ಕೆ ಮಂಗಳವಾರ ಎರಡು ಚಿನ್ನದ ಪದಕ ಸಿಕ್ಕಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)