varthabharthi

ಗಲ್ಫ್ ಸುದ್ದಿ

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಮಾಲುದ್ದೀನ್ ಅಂಬ್ಲಮೊಗರು ಆಯ್ಕೆ

ಡಿ.1: ಕೆಸಿಎಫ್ ಶಾರ್ಜಾ ವಲಯದಿಂದ ಮೀಲಾದ್ ಸಮಾವೇಶ

ವಾರ್ತಾ ಭಾರತಿ : 10 Oct, 2018

ಮಂಗಳೂರು, ಅ.10: ಪ್ರವಾದಿ ಮುಹಮ್ಮದ್ (ಸ.ಅ)ರವರ ಜನ್ಮದಿನದ ಪ್ರಯುಕ್ತ, ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಶಾರ್ಜಾ ರೆನ್‌ನ ವತಿಯಿಂದ ಡಿ.1ರಂದು ಸಂಜೆ 5 ಗಂಟೆಗೆ ರೋಲಾದಲ್ಲಿರುವ ಮುಬಾರಕ್ ಸೆಂಟರ್‌ನಲ್ಲಿ ಮೀಲಾದ್ ಸಮಾವೇಶ ನಡೆಯಲಿದೆ.

‘ಇಲೈಕ ಯಾ ರಸೂಲಾಲ್ಲಹ್’ (ಸಂದೇಶ ವಾಹಕರೇ ತಮ್ಮಡೆಗೆ) ಎಂಬ ಶೀರ್ಷಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೈಯದ್ ವಿ.ಪಿ.ಎ. ತಂಙಳ್ ದಾರಿಮಿ ದುಆಗೈಯಲಿದ್ದಾರೆ.

ಮೀಲಾದ್ ಸಮಾವೇಶದ ಯಶಸ್ವಿಗೆ ರಚಿಸಲಾದ ಸ್ವಾಗತ ಸಮಿತಿಯ ಸಲಹಾ ಮಂಡಳಿಯಲ್ಲಿ ಸೈಯದ್ ಶಿಹಾಬ್ ತಂಙಳ್, ಅಬೂಸ್ವಾಲಿಹ್ ಸಖಾಫಿ, ಅಝೀಝ್ ಸಖಾಫಿ, ರಜಬ್ ಮುಹಮ್ಮದ್, ಖಾದರ್ ಸಖಾಫಿ ಅವರಿದ್ದಾರೆ. ಸಮಿತಿಯ ಅಧ್ಯಕ್ಷರಾಗಿ ಕಮಾಲುದ್ದೀನ್ ಅಂಬ್ಲಮೊಗರು, ಉಪಾಧ್ಯಕ್ಷರಾಗಿ ಇಲ್ಯಾಸ್ ತೆಕ್ಕಾರ್ ಮತ್ತು ರಝಾಕ್ ಹಾಜಿ, ಸಂಚಾಲಕರಾಗಿ ಮೂಸಾ ಹಾಜಿ ಬಸರಾ, ಸಹ ಸಂಚಾಲಕರಾಗಿ ಹುಸೈನ್ ಇನೋಳಿ ಮತ್ತು ಅಬ್ದುಲ್ ರಝಾಕ್ ಹುಮೈದಿ, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಕುಂಞಿ ಪೆರುವಾಯಿ ಆಯ್ಕೆಯಾಗಿದ್ದಾರೆ.

ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಉಸ್ಮಾನ್ ಹಾಜಿ, ಸಂಚಾಲಕರಾಗಿ ಕರೀಂ ಮುಸ್ಲಿಯಾರ್, ಸಂಯೋಜಕರಾಗಿ ಪೈಝಲ್ ಪಿ.ಕೆ. ಮತ್ತು ಅಶ್ರಫ್ ಸತ್ತಿಕ್ಕಲ್, ಸಿದ್ಧತಾ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಮದನಿ ಸಂಪ್ಯ, ಸಂಚಾಲಕರಾಗಿ ಶೌಕತ್ ಅಲಿ ಕೂಳೂರು, ಸಂಯೋಜಕರಾಗಿ ಅಶ್ರಫ್ ಮುನ್ನೂರು, ಭೋಜನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ಲಾ ನಲ್ಕ ಹಾಜಿ, ಸಂಚಾಲಕರಾಗಿ ಶರೀಫ್ ಸಾಲೆತ್ತೂರು, ಸಂಯೋಜಕರಾಗಿ ರಫೀಕ್ ತೆಕ್ಕಾರ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಝೇನುದ್ದೀನ್ ಹಾಜಿ, ಸಂಚಾಲಕರಾಗಿ ಅಕ್ಬರ್ ಅಲಿ, ಸಂಯೋಜಕರಾಗಿ ಅಝರುದ್ದೀನ್, ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿ ತಾಜುದ್ದೀನ್ ಅಮ್ಮುಂಜೆ, ಸಂಚಾಲಕರಾಗಿ ಸಿರಾಜುದ್ದೀನ್ ಅರಿಯಡ್ಕ, ಸಂಯೋಜಕರಾಗಿ ಅಶ್ರಫ್ ಮುಸ್ಲಿಯಾರ್ ಅಳಿಕೆ, ಪ್ರತಿಭೋತ್ಸವ ಸಮಿತಿಯ ಅಧ್ಯಕ್ಷರಾಗಿ ಇಬ್ರಾಹೀಂ ಸಖಾಫಿ ಕೆದುಂಬಾಡಿ, ಸಂಚಾಲಕರಾಗಿ ಅಬ್ದುಲ್ ರಝಕ್ ಮುಸ್ಲಿಯಾರ್, ಸಂಯೋಜಕರಾಗಿ ಬಿ.ಟಿ. ಅಶ್ರಫ್ ಲೇತಿಫಿ ಮುಸ್ಲಿಯಾರ್, ಸ್ವಯಂ ಸೇವಕ ಸಮಿತಿಯ ಅಧ್ಯಕ್ಷರಾಗಿ ಫೈಝಲ್ ಈಶ್ವರಮಂಗಳ, ಸಂಚಾಲಕರಾಗಿ ಶಾದುಲಿ, ಸಂಯೋಜಕರಾಗಿ ಅನ್ಸಾರ್ ಸಾಲೆತ್ತೂರು, ವೇದಿಕೆ ಮತ್ತು ಧ್ವನಿ-ಬೆಳಕು ವ್ಯವಸ್ಥೆ ಸಮಿತಿಯ ಅಧ್ಯಕ್ಷರಾಗಿ ಜಬ್ಬಾರ್ ಹಾಜಿ ಇನೋಳಿ, ಸಂಚಾಲಕರಾಗಿ ಆದಂ ಅತೂರು, ಸಂಯೋಜಕರಾಗಿ ಅಲಿ ಮುದುಂಗಾರ್ ಮತ್ತು ಇಸ್ಮಾಯಿಲ್ ಸಖಾಫಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)