varthabharthi

ರಾಷ್ಟ್ರೀಯ

ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಕಾರ್ತಿ ಚಿದಂಬರಂಗೆ ಸೇರಿದ 54 ಕೋ.ರೂ. ಮೌಲ್ಯದ ಆಸ್ತಿ ಜಪ್ತಿ

ವಾರ್ತಾ ಭಾರತಿ : 11 Oct, 2018

ಹೊಸದಿಲ್ಲಿ, ಅ.11: ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ವಿತ್ತಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಭಾರತ, ಬ್ರಿಟನ್ ಮತ್ತು ಸ್ಪೈನ್ ದೇಶಗಳಲ್ಲಿ ಹೊಂದಿರುವ 54 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. 

ತಮಿಳುನಾಡಿನ ಊಟಿ ಮತ್ತು ಕೊಡೈಕನಾಲ್‌ಗಳಲ್ಲಿ ಇರುವ ಆಸ್ತಿ ಹಾಗೂ ದಿಲ್ಲಿಯ ಜೋರ್‌ಭಾಗ್‌ನಲ್ಲಿ ಕಾರ್ತಿ ಚಿದಂಬರಂ ಹೊಂದಿರುವ ಫ್ಲಾಟ್ ಅನ್ನು ಹಣ ಅಕ್ರಮ ಸಾಗಣೆ ತಡೆ ಕಾಯ್ದೆಯಡಿ ಜಫ್ತಿ ಮಾಡುವಂತೆ ಇಡಿ ತಾತ್ಕಾಲಿಕ ಆದೇಶ ಹೊರಡಿಸಿದೆ. ಅಲ್ಲದೆ ಬ್ರಿಟನ್‌ನ ಸಾಮರ್‌ಸೆಟ್‌ನಲ್ಲಿರುವ ಕಾಟೇಜ್ ಮತ್ತು ಮನೆ, ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ ಟೆನಿಸ್ ಕ್ಲಬ್ ಕೋರ್ಟ್‌ಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಚೆನ್ನೈಯ ಬ್ಯಾಂಕ್‌ನಲ್ಲಿ ಅಡ್ವಾಂಟೇಜ್ ಸ್ಟ್ರಟೆಜಿಕ ಕನ್‌ಸಲ್ಟಿಂಗ್ ಸಂಸ್ಥೆಯ ಹೆಸರಲ್ಲಿ ಇರಿಸಲಾಗಿರುವ 90 ಲಕ್ಷ ರೂ. ಮೊತ್ತದ ಠೇವಣಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)