varthabharthi

ರಾಷ್ಟ್ರೀಯ

ನಷ್ಟದಲ್ಲಿದ್ದವರಿಗೆ ಪ್ರಧಾನಿ ಮೋದಿ ಗಿಫ್ಟ್ ಕೊಟ್ಟಿದ್ದಾರೆ : ರಾಹುಲ್ ಗಾಂಧಿ ಆರೋಪ

ವಾರ್ತಾ ಭಾರತಿ : 11 Oct, 2018

ಹೊಸದಿಲ್ಲಿ, ಅ.11: ಪ್ರಧಾನಿ ನರೇಂದ್ರ ಮೋದಿ ನಷ್ಟದಲ್ಲಿರುವವರಿಗೆ ಗಿಫ್ಟ್ ಕೊಟ್ಟಿದ್ದಾರೆ. ನಷ್ಟದಲ್ಲಿರುವ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂ. ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

 ರಫೇಲ್ ಹಗರಣ ಸಂಬಂಧ  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ರಾಹುಲ್ ಗಾಂಧಿ ಅವರು  ಪ್ರಧಾನಿ ಮೋದಿ  ಅನಿಲ್ ಅಂಬಾನಿಯ ಚೌಕೀದಾರ ಆಗಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ  ಭ್ರಷ್ಟ. ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆದಿದೆ. ರಫೆಲ್  ಹಗರಣ ಬಗ್ಗೆ ಅವರು ಏನನ್ನು ಮಾತನಾಡುತ್ತಿಲ್ಲ.  ಪತ್ರಿಕೆಗಳಲ್ಲಿ ಬಂದ ವರದಿ ನಮ್ಮ ಆರೋಪಕ್ಕೆ ಪುಷ್ಠಿ ನೀಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)