varthabharthi

ಕರ್ನಾಟಕ

ನಾವು ಅಧಿಕಾರಕ್ಕೆ ಬಂದಿರುವುದು ಸಮಾಜಸೇವೆಗಲ್ಲ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

ವಾರ್ತಾ ಭಾರತಿ : 11 Oct, 2018

ಶಿರಸಿ, ಅ.11: ನಾವು ಅಧಿಕಾರಕ್ಕೆ ಬಂದಿದ್ದು ರಾಜಕಾರಣ ಮಾಡುವುದಕ್ಕೆ ಹೊರತು, ಸಮಾಜ ಸೇವೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಶಿರಸಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿದ್ದವರಿಗೆ ರಾಜಕಾರಣವೆನ್ನುವುದು ವೃತ್ತಿಯಾಗಿರುತ್ತದೆಯೇ ಹೊರತು ಸೇವೆಯಲ್ಲ. ಅದಕ್ಕಾಗಿಯೇ ಶಾಸಕ, ಎಂಪಿಗಳಾಗಿರುವುದು. ನಮಗೆ ರಾಜಕಾರಣ ಬಿಟ್ಟು ಬೇರೇನೂ ಮಾಡೋದಕ್ಕೆ ಬರುವುದಿಲ್ಲ. ನಾವು ರಾಜಕಾರಣವನ್ನೇ ಮಾಡುವುದು ಎಂದಿದ್ದಾರೆ. ಅಲ್ಲದೆ ತನ್ನ ಈ ಹೇಳಿಕೆಯನ್ನು ಮಾಧ್ಯಮದವರು ಹೇಗೆ ಬೇಕಾದರೂ ಬರೆಯಲಿ. ಅದು ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂದು ಕೂಡ ಈ ಸಂದರ್ಭದಲ್ಲಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)