varthabharthi

ರಾಷ್ಟ್ರೀಯ

ಇನ್ನೋರ್ವ ನಟಿಯಿಂದ ಅಲೋಕ್‌ನಾಥ್ ವಿರುದ್ದ ಲೈಂಗಿಕ ಕಿರುಕುಳದ ಆರೋಪ

ವಾರ್ತಾ ಭಾರತಿ : 11 Oct, 2018

ಹೊಸದಿಲ್ಲಿ,ಅ.12: ಬಾಲಿವುಡ್ ನಟ ಅಲೋಕ್‌ನಾಥ್ ಕೆಲವು ವರ್ಷಗಳ ಹಿಂದೆ ಟೆಲಿಫಿಲ್ಮ್ ಒಂದರ ಚಿತ್ರೀಕರಣದ ವೇಳೆ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ನಟಿ ದೀಪಿಕಾ ಅಮೀನ್ ಆರೋಪಿಸಿದ್ದಾರೆ. ಬರಹಗಾರ್ತಿ,ನಿರ್ಮಾಪಕಿ ಹಾಗೂ ನಿರ್ದೇಶಕಿ ವಿನಿತಾ ನಂದಾ ಹಾಗೂ ನಟಿ ಸಂಧ್ಯಾ ಮೃದುಲ್ ಅವರು ಅಲೋಕ್‌ನಾಥ್ ವಿರುದ್ದ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬೆನ್ನಲ್ಲೇ ದೀಪಿಕಾ ಅಮೀನ್ ಈ ಆರೋಪ ಮಾಡಿದ್ದಾರೆ.

ಅಲೋಕ್‌ನಾಥ್ ಮಹಿಳೆಯರಿಗೆ ಕಿರುಕುಳ ನೀಡುವಂತಹ ವಿಪರೀತ ಮದ್ಯಪಾನ ವ್ಯಸನಿಯೆಂಬುದು ಎಲ್ಲರಿಗೂ ತಿಳಿದಿದೆ. ‘‘ ಕೆಲವು ವರ್ಷಗಳ ಹಿಂದೆ, ಟೆಲಿಚಿತ್ರವೊಂದರ ಹೊರಾಂಗಣದ ಚಿತ್ರೀಕರಣದ ಸಂದರ್ಭ, ಆತ ನನ್ನ ಕೊಠಡಿಯೊಳಗೆ ನುಗ್ಗಲು ಯತ್ನಿಸಿದ್ದ. ಮಹಿಳೆಯರೆಂದರೆ ಆತ ಜೊಲ್ಲು ಸುರಿಸುತ್ತಿದ್ದ, ಅತಿಯಾಗಿ ಮದ್ಯಸೇವಿಸಿದ್ದ ಹಾಗೂ ರಾದ್ದಾಂತ ಮಾಡಿದ್ದ. ಆಗ ಇಡೀ ಚಿತ್ರೀಕರಣ ತಂಡವು ನನ್ನ ಬೆಂಬಲಕ್ಕೆ ನಿಂತು, ನಾನು ಸುರಕ್ಷಿತಳಾಗಿರುವಂತೆ ನೋಡಿಕೊಂಡಿತ್ತು’’ ಎಂದು ಅಮೀನ್ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ. ಆಗ ನಾನು ಸಣ್ಣ ಪ್ರಾಯದವಳಾಗಿದ್ದೆ. ಆದರೆ ಆತ ಎಷ್ಟು ಭಯಾನಕನಾಗಿದ್ದನೆಂಬುದು ಈಗಲೂ ನನಗೆ ನೆನಪಿದೆ’’ ಎಂದು ಅಮೀನ್ ಹೇಳಿದ್ದಾರೆ.

ತೀರಾ ಇತ್ತೀಚೆಗೆ ತಾನು ಅಲೋಕ್‌ನಾಥ್ ಜೊತೆ ಸೋನು ಕೆ ಟಿಟು ಕಿ ಸ್ವೀಟಿ ಚಿತ್ರದಲ್ಲಿಯೂ ತಾನು ಕೆಲಸ ಮಾಡಿದ್ದೇನೆ. ಆದರೆ ಈಗ ಅತ ಶಾಂತ ಹಾಗೂ ಸಮಾಧಾನಚಿತ್ತನಾಗಿ ಇರುವಂತೆ ಕಾಣುತ್ತದೆ. ಬಹುಶಃ ಆತ ಬದಲಾಗಿರಲೂಬಹುದು. ಬಹುಶಃ ನಿರ್ದೇಶ ಲುವ್ ರಂಜನ್ ಅವರು, ತಾನು ಇಂತಹ ವರ್ತನೆಯನ್ನು ಸಹಿಸಲಾರೆ ಎಂದು ಅಲೋಕ್‌ನಾಥ್‌ಗೆ ಮುನ್ನೆಚ್ಚರಿಕೆ ನೀಡಿರಲೂ ಬಹುದು ಎಂದು ದೀಪಿಕಾ ಅಮೀನ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

1990ರ ದಶಕದಲ್ಲಿ ಜನಪ್ರಿಯ ಟಿವಿ ಧಾರಾವಾಹಿ ತಾರಾದಲ್ಲಿ ಮುಖ್ಯ ನಟಿಗೆ ಕಿರುಕುಳ ನೀಡಿದ್ದಕ್ಕಾಗಿ ಹೊರದಬ್ಬಲ್ಪಟ್ಟ ಬಳಿಕ ಅಲೋಕ್‌ನಾಥ್ ತನ್ನ ಮೇಲೆ ಅತ್ಯಾಚಾರ ವೆಸಗಿದ್ದನೆಂದು ನಿರ್ಮಾಪಕಿ, ನಿರ್ದೇಶಕಿ ವಿನಿತಾ ನಂದಾ ಆರೋಪಿಸಿದ್ದರು. ಬುಧವಾರದಂದು ನಟಿ ಸಂಧ್ಯಾ ಮೃದುಲ್ ಅವರು, ಕೆಲವು ವರ್ಷಗಳ ಹಿಂದೆ ಅಲೋಕ್‌ನಾಥ್, ಕೊಡೈಕೆನಾಲ್‌ನ ಹೊಟೇಲೊಂದರಲ್ಲಿ ಪಾನಮತ್ತನಾಗಿ ತನಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದನೆಂದು ಆರೋಪಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)