varthabharthi

ಅಂತಾರಾಷ್ಟ್ರೀಯ

ವಾಪಸ್ ಬನ್ನಿ, ಇಲ್ಲಿ ಉತ್ತಮ ವೈದ್ಯರಿದ್ದಾರೆ: ಮುಶರ್ರಫ್‌ಗೆ ಪಾಕ್ ಮುಖ್ಯ ನ್ಯಾಯಾಧೀಶ

ವಾರ್ತಾ ಭಾರತಿ : 11 Oct, 2018

ಇಸ್ಲಾಮಾಬಾದ್, ಅ. 11: ನೀವು ಪಾಕಿಸ್ತಾನಕ್ಕೆ ವಾಪಸ್ ಬನ್ನಿ, ಇಲ್ಲಿ ಉತ್ತಮ ವೈದ್ಯರಿದ್ದಾರೆ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗುರುವಾರ ದೇಶದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್‌ರಿಗೆ ಹೇಳಿದೆ.

2007ರಲ್ಲಿ ಸಂವಿಧಾನವನ್ನು ಅಮಾನತಿನಲ್ಲಿ ಇಟ್ಟಿರುವುದಕ್ಕಾಗಿ ದೇಶದ್ರೋಹ ಮೊಕದ್ದಮೆಯನ್ನು ಎದುರಿಸುತ್ತಿರುವ ಮುಶರ್ರಫ್ 2016ರಿಂದ ದುಬೈಯಲ್ಲಿ ವಾಸಿಸುತ್ತಿದ್ದಾರೆ. ನನ್ನ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಯಲ್ಲಿ ನೆಲೆಸಿರುವುದಾಗಿ ಅವರು ಹೇಳಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೀಠವೊಂದರ ನೇತೃತ್ವ ವಹಿಸಿದ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರು 75 ವರ್ಷದ ಮುಶರ್ರಫ್‌ರಿಗೆ ಈ ಕಟು ಸಂದೇಶವನ್ನು ರವಾನಿಸಿದ್ದಾರೆ.

ವಿಚಾರಣೆಯ ವೇಳೆ ಮುಶರ್ರಫ್‌ರ ವಕೀಲ ಅಖ್ತರ್ ಶಾ ಲಿಖಿತ ಉತ್ತರವೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು ಹಾಗೂ ‘‘ನನ್ನ ಕಕ್ಷಿದಾರನ ಕಾಯಿಲೆಯನ್ನು ಗೌಪ್ಯವಾಗಿಡುವಂತೆ ನಾನು ನ್ಯಾಯಪೀಠವನ್ನು ವಿನಂತಿಸುತ್ತೇನೆ’’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶ ನಿಸಾರ್, ‘‘ಈ ಕಾಯಿಲೆಯಿಂದ ಬಳಲುತ್ತಿರುವ ಬೇರೆ ವ್ಯಕ್ತಿಗಳು ದೇಶದಲ್ಲಿದ್ದಾರೆ’’ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)