varthabharthi

ಗಲ್ಫ್ ಸುದ್ದಿ

‘ಲೂಬನ್’ ಚಂಡಮಾರುತ: ಒಮನ್ ಶಾಲೆಗಳು ಬಂದ್

ವಾರ್ತಾ ಭಾರತಿ : 11 Oct, 2018

 ದುಬೈ, ಅ. 11: ‘ಲೂಬನ್’ ಚಂಡಮಾರುತಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿರುವ ಒಮನ್, ದಕ್ಷಿಣ ಭಾಗದಲ್ಲಿನ ಶಾಲೆಗಳು ಮತ್ತು ಬಂದರುಗಳನ್ನು ಗುರುವಾರ ಮುಚ್ಚಿದೆ.

ಅದೇ ವೇಳೆ, ಯಮನ್‌ನಲ್ಲಿ ಆರೋಗ್ಯ ಅಧಿಕಾರಿಗಳು ಚಂಡಮಾರುತವನ್ನು ಎದುರಿಸಲು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಯಮನ್‌ನ ಪಶ್ಚಿಮದ ಪ್ರಾಂತ ಮಹ್ರಾದಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ. ತಯಾರಾಗಿ ಇರುವಂತೆ ಆಸ್ಪತ್ರೆಗಳು, ವೈದ್ಯಕೀಯ ಸಿಬ್ಬಂದಿ ಮತ್ತು ತುರ್ತು ಸೇವೆಗಳಿಗೆ ಸೂಚನೆ ನೀಡಿದ್ದಾರೆ.

ಒಮನ್‌ನ ದೋಫರ್ ರಾಜ್ಯದಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ಅಲ್ಲಿನ ಸಲಾಲಾ ಬಂದರು ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)