varthabharthi

ಬೆಂಗಳೂರು

ಪ್ರೊ.ಸಿ.ಮಹಾದೇವಪ್ಪಗೆ ವಿದ್ಯಾಶಂಕರ ಪ್ರಶಸ್ತಿ, ಡಾ.ಎಸ್.ಎಸ್.ಅಂಗಡಿಗೆ ವಿದ್ಯಾಶಂಕರ ಪುರಸ್ಕಾರ

ವಾರ್ತಾ ಭಾರತಿ : 11 Oct, 2018

ಬೆಂಗಳೂರು, ಅ.11: ಡಾ.ಎಸ್.ವಿದ್ಯಾಶಂಕರ್ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಪ್ರತಿವರ್ಷ ಕೊಡಮಾಡುವ ವಿದ್ಯಾಶಂಕರ ಪ್ರಶಸ್ತಿಯನ್ನು ಪ್ರೊ.ಸಿ.ಮಹಾದೇವಪ್ಪ ಹಾಗೂ ವಿದ್ಯಾಶಂಕರ ಪುರಸ್ಕಾರ ಡಾ.ಎಸ್.ಎಸ್.ಅಂಗಡಿಗೆ ನೀಡಲಾಗುತ್ತಿದೆ.

ಪುರಸ್ಕಾರವು 10ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ನ.18ರಂದು ನಡೆಯುವ ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಪರಿಚಯ: ಪ್ರೊ.ಸಿ.ಮಹಾದೇವಪ್ಪರವರು ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಗ್ರಂಥ ಸಂಪಾದಕರಾಗಿ ಸೇವೆಗೆ ಸೇರಿ, ನಂತರ ವಿವಿಧ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಗುಬ್ಬಿಮಲ್ಲಣಾರ್ಯಾನ ಭಾವಚಿಂತಾರತ್ನ, ನಾಗವರ್ಮನ ಚಂದ್ರರಾಜ ಸೇರಿದಂತೆ 25ಕೃತಿಗಳನ್ನು ಸಂಪಾದಿಸಿದ್ದಾರೆ.

ಡಾ.ಎಸ್.ಎಸ್.ಅಂಗಡಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸರಳ ಶಬ್ದಮಣಿದರ್ಪಣ, ಕರ್ನಾಟಕ ಭಾಷಾಭೂಷಣಂ, ಸರಳ ಕವಿರಾಜಮಾರ್ಗ, ಸರಳ ವಡ್ಡಾರಾಧನೆ ಸೇರಿದಂತೆ 10ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)