varthabharthi

ಕರಾವಳಿ

ಬಿರಾವು: ವಿವಾಹಿತ ಆತ್ಮಹತ್ಯೆ

ವಾರ್ತಾ ಭಾರತಿ : 11 Oct, 2018

ಮೂಡುಬಿದಿರೆ, ಅ. 11: ವಿವಾಹಿತರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಪತ್ನಿಯ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಹೊಸಬೆಟ್ಟು ಗ್ರಾಮದ ಬಿರಾವು ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. 

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ರಾಜು (45) ಎಂದು ಗುರುತಿಸಲಾಗಿದೆ.

ಗುರುವಾರ ಮಧ್ಯಾಹ್ನ ಇವರ ಪತ್ನಿ ಅಂಗಡಿಗೆ ಹೋಗಿ ವಾಪಾಸು ಬಂದಾಗ ಮನೆಯ ಬಾಗಿಲು ಹಾಕಲಾಗಿತ್ತು. ಹತ್ತಿರದಲ್ಲಿದ್ದ ತನ್ನ ಪತಿಯ ಅಣ್ಣನ ಮಗನನ್ನು ಕರೆಸಿ ಬಾಗಿಲು ತೆರೆದು ನೋಡಿದಾಗ ರಾಜು ಅವರು ನೆಲದಲ್ಲಿ ಬಿದ್ದು ನರಳಾಡುತ್ತಿದ್ದರು. ಮನೆ ಪಕ್ಕಾಸಿಗೆ ಕಟ್ಟಿದ್ದ ಸೀರೆ ನೇತಾಡುತಿತ್ತು. ಕೂಡಲೇ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)