varthabharthi

ಕ್ರೀಡೆ

ಲಸಿತ್ ಮಾಲಿಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಚಿನ್ಮಯಿ ಶ್ರೀಪಾದ

ವಾರ್ತಾ ಭಾರತಿ : 12 Oct, 2018

ಮುಂಬೈ , ಅ.11: ಖ್ಯಾತ ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ ಅವರು  ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

ಚಿನ್ಮಯಿ ಶ್ರೀಪಾದ #MeToo ಅಭಿಯಾನದಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ವರ್ಷಗಳ ಹಿಂದೆ ಮುಂಬೈನ ಹೋಟೆಲ್​​ ಒಂದರಲ್ಲಿ ನನ್ನ ಗೆಳತಿಯನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಲಸಿತ್ ಮಾಲಿಂಗ ಲೈಂಗಿಕ ಕಿರುಕುಳ ನಡೆಸಿರುವುದಾಗಿ ಆರೋಪಿಸಿದ್ದಾರೆ.

 “ಐಪಿಎಲ್​​  ಪಂದ್ಯ ನಡೆಯುತ್ತಿದ್ದ ಹೋಟೆಲ್ ಸಿಬ್ಬಂದಿ ನಿಮ್ಮ ಗೆಳತಿ ಶ್ರೀಲಂಕಾ ಕ್ರಿಕೆಟರ್ ಲಸಿತ್ ಮಾಲಿಂಗ ಅವರ ರೂಂಗೆ ತೆರಳಿರುವುದಾಗಿ ತಿಳಿಸಿದ್ದರು. ಆದರೆ ನಾನು ಅಲ್ಲಿ ಹೋಗಿ ನೋಡಿದಾಗ ನನ್ನ ಫ್ರೆಂಡ್ ಇರಲಿಲ್ಲ.  ಅಲ್ಲಿ ಮಾಲಿಂಗ  ದೌರ್ಜನ್ಯ ನಡೆಸಿದರು. ನನಗೆ  ಅವಮಾನವಾಗುತ್ತದೆ ಎಂದು ಎಲ್ಲೂ ಈ ವಿಷಯ ಯಾರಿಗೂ ತಿಳಿಸಿರಲಿಲ್ಲ” ಎಂದು ಅವರು ಹೇಳಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)