varthabharthi

ಕರಾವಳಿ

ಎಸ್ಸೆಸ್ಸೆಫ್ ಟೀಮ್ ಹಸನೈನ್‌ನಿಂದ ಉತ್ತರ ಕರ್ನಾಟಕ ರಿಹ್ಲಾ ಯಾತ್ರೆ

ವಾರ್ತಾ ಭಾರತಿ : 12 Oct, 2018

ಮಂಗಳೂರು, ಅ.12: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಅಧೀನದ ಟೀಮ್ ಹಸನೈನ್ ಕಾರ್ಯಕರ್ತರಿಗೆ ಉತ್ತರ ಕರ್ನಾಟಕದಲ್ಲಿ ರಿಹ್ಲಾ ದಅವಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ 10 ಜಿಲ್ಲೆಗಳ ಡಿವಿಷನ್‌ಗಳ ತಂಡವು ಉತ್ತರ ಕರ್ನಾಟಕ ಪ್ರಮುಖ ಜಿಲ್ಲೆಗಳ ಹಳ್ಳಿಗಳಿಗೆ ದಅವಾ ತೆರಳಲಿದೆ.

ಇದರ ಮೊದಲ ತಂಡವಾಗಿ ಅ.13ರಿಂದ 15ರವರೆಗೆ ಮೂಡುಬಿದಿರೆ ಡಿವಿಷನ್ ಟೀಮ್ ಹಸನೈನ್ ಕಾರ್ಯಕರ್ತರು ಕೊಪ್ಪಳ ಜಿಲ್ಲೆಯ ರಾಮನಗರ, ಬಟ್ಟರ ನರ್ಸಾಪುರ, ಕಕ್ಕರಗೋಳ, ಹುಲಿ ಹೈದರ್, ತಾವರಗೆರೆ, ಸಿದ್ದಾಪುರ, ಯರಡೋಣ, ಬೆನ್ನೂರು ಹಳ್ಳಿಗಳಿಗೆ ತೆರಳಲಿದೆ.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಮಾರ್ಗದರ್ಶನದಲ್ಲಿ ಈ ತಂಡವು ಸಿದ್ದೀಕ್ ಬಜ್ಪೆನೇತೃತ್ವದಲ್ಲಿ ದಅವಾ ತೆರಳಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)